19 June 2025 | Join group

ಕೇನ್ಸ್ ಚಲನಚಿತ್ರೋತ್ಸವದಲ್ಲಿ ಹಣೆಯ ಮೇಲೆ ಸಿಂಧೂರ ಹಾಕಿ 'ಆಪರೇಷನ್ ಸಿಂಧೂರ್' ಸಂದೇಶವನ್ನು ವಿಶ್ವಕ್ಕೆ ಕಳುಹಿಸಿದ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್

  • 22 May 2025 10:36:19 AM

ಕೇನ್ಸ್ ಚಲನಚಿತ್ರೋತ್ಸವವು ಪ್ರಪಂಚದ ಅತ್ಯಂತ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಮೇ ತಿಂಗಳಲ್ಲಿ ಫ್ರಾನ್ಸ್‌ನ ಕಾನ್ಸ್ ನಗರದಲ್ಲಿ ನಡೆಯುತ್ತದೆ. ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ನಟರು, ಪತ್ರಕರ್ತರು ಮತ್ತು ಚಲನಚಿತ್ರ ಪ್ರೇಮಿಗಳು ಭಾಗವಹಿಸುವ ಈ ಚಲನಚಿತ್ರೋತ್ಸವದಲ್ಲಿ ಒಬ್ಬರಿಗಿಂತ ಒಬ್ಬರು ವಿಭಿನ್ನ ರೀತಿಯಲ್ಲಿ ಕಾಣಲು ಪ್ರಯತ್ನ ಪಡುತ್ತಾರೆ.

 

ಇದೀಗ ಐಶ್ವರ್ಯ ರೈ ಬಚ್ಚನ್ ಕೂಡ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಎಲ್ಲರ ಮನಗೆದ್ದಿದ್ದಾರೆ. ಐಶ್ವರ್ಯ ರೈ ರೆಡ್ ಕಾರ್ಪೆಟ್ ನಲ್ಲಿ ಬಿಳಿ ಸೀರೆಯಲ್ಲಿ ದೇವಕನ್ಯೆಯಂತೆ ನಡೆದಾಡಿದ್ದಾರೆ ಮತ್ತು ಅವರ ಸೌಂದರ್ಯವನ್ನು ಸೆರೆ ಹಿಡಿಯಲು ಎಲ್ಲಾ ಕ್ಯಾಮೆರಾಗಳ ಪೈಪೋಟಿಯೇ ನಡೆದಿತ್ತು.

 

ಹಣೆಯ ಮೇಲೆ ಕೆಂಪು ಸಿಂಧೂರ ಧರಿಸಿ ಅಭಿಮಾನಿಗಳ ಮನಸೂರೆಗೆದ್ದ ಐಶ್ವರ್ಯ, ಪಾಕ್ ವಿರುದ್ಧ ಭಾರತ ನಡೆಸಿದ 'ಆಪರೇಷನ್ ಸಿಂಧೂರ' ವನ್ನು ನೆನಪಿಸಿದರು. ಐಶ್ವರ್ಯರವರ ಈ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ.

 

2002 ರಲ್ಲಿ ಐಶ್ವರ್ಯ ಕೇನ್ಸ್ ನಲ್ಲಿ ಮೊದಲ ಬಾರಿಗೆ ರೆಡ್ ಕಾರ್ಪೆಟ್ ಮೇಲೆ ನಡೆದ ದಿನಗಳನ್ನು ನೆನೆಸಿ ಅಭಿಮಾನಿಗಳು ಇವರನ್ನು ಶ್ಲಾಘಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಐಶ್ವಯ ರೈ ಬಚ್ಚನ್ ಫೋಟೋಗಳು ಹರಿದಾಡುತ್ತಿದೆ.

 

ಕೇನ್ಸ್ ಚಲನಚಿತ್ರೋತ್ಸವವು ಚಲನಚಿತ್ರರಂಗದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಲು, ವಿಭಿನ್ನ ಸಂಸ್ಕೃತಿಗಳ ಚಲನಚಿತ್ರಗಳನ್ನು ಪರಿಚಯಿಸಲು ಮತ್ತು ಚಲನಚಿತ್ರಗಳ ಮೂಲಕ ಸಾಮಾಜಿಕ ಸಂದೇಶಗಳನ್ನು ಹರಡಲು ಮಹತ್ವಪೂರ್ಣ ಪಾತ್ರ ವಹಿಸುತ್ತದೆ.