ಮೈಸೂರು ಸ್ಯಾಂಡಲ್ ಸೋಪ್ ಭಾರತದ ಏಕೈಕ ಹಾಗೂ ವಿಶ್ವದಲ್ಲಿಯೇ ಅಪರೂಪದ ಸ್ವಾಭಾವಿಕ ಚಂದನದ ತೈಲದಿಂದ ತಯಾರಾಗುವ ಸೋಪ್ ಆಗಿದೆ. ಸ್ನಾನ ಮಾಡಿ ನಂತರ ದೇಹದಿಂದ ಬರುವ ಆ ಘಮ ಘಮ ಪರಿಮಳಕ್ಕೆ ಮನಸೋಲದವರಿಲ್ಲ. ಕರ್ನಾಟಕ ರಾಜ್ಯದ ಹೆಮ್ಮೆಯ ಮೈಸೂರ್ ಸ್ಯಾಂಡಲ್ ಸೋಪ್ ದೇಶ ವಿದೇಶಗಳಲ್ಲಿ ಬಹಳ ಹೆಸರುವಾಸಿ.
ವಿಶೇಷ ವಿನ್ಯಾಸದ ಮೈಸೂರ್ ಸ್ಯಾಂಡಲ್ ಸೋಪ್ ಲೋಗೋ
ಮೈಸೂರ್ ಸ್ಯಾಂಡಲ್ ಸೋಪ್ ನಲ್ಲಿ ಬಹಳ ವಿಶೇಷವಾದ ಲೋಗೋ ವನ್ನು ಅಳವಡಿಸಲಾಗಿದೆ. ಒಂದು ಗಟ್ಟಿ ಮುಟ್ಟದ ಪ್ರಾಣಿ ಮತ್ತು ಇನ್ನೊಂದು ಧೈರ್ಯ ಮತ್ತು ಬುದ್ಧಿವಂತಿಕೆಯ ಪ್ರಾಣಿ ಈ ಎರಡು ಪ್ರಾಣಿಗಳ ದೇಹವನ್ನು ಬಳಸಿ ಮೈಸೂರ್ ಸ್ಯಾಂಡಲ್ ಸೋಪ್ ಲೋಗೋ ರಚಿಸಿಲಾಗಿದೆ.
ಅದಾವುದೆಂದರೆ, ಸಿಂಹದ ದೇಹ ಮತ್ತು ಆನೆಯ ತಲೆಯನ್ನು ಹೊಂದಿರುವ ಪೌರಾಣಿಕ ಜೀವಿ ಶರಭವನ್ನು ಕಂಪನಿಯ ಲೋಗೋ ಆಗಿ ಆಯ್ಕೆ ಮಾಡಲಾಗಿದೆ. ಏಕೆಂದರೆ ಈ ಜೀವಿ ಬುದ್ಧಿವಂತಿಕೆ, ಧೈರ್ಯ ಮತ್ತು ಶಕ್ತಿಯ ಸಂಯೋಜಿತ ಸದ್ಗುಣಗಳನ್ನು ಪ್ರತಿನಿಧಿಸುತ್ತದೆ ಮತ್ತು ಕಂಪನಿಯ ತತ್ವಶಾಸ್ತ್ರವನ್ನು ಸಂಕೇತಿಸುತ್ತದೆ ಎನ್ನುವ ಉದ್ದೇಶದಿಂದ ಈ ರೀತಿಯ ಲೋಗೋ ಡಿಸೈನ್ ಮಾಡಲಾಗಿದೆಯಂತೆ.
ಬಾಲಿವುಡ್ ನಟಿ ತಮನ್ನಾ ಭಾಟಿಯಾ ಬ್ರಾಂಡ್ ಅಂಬಾಸಿಡರ್
ಮೇ 2025 ರಲ್ಲಿ, ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರೊಂದಿಗೆ 6.2 ಕೋಟಿ ರೂ.ಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ವರದಿಯಾಗಿದೆ. ಯಾವಾಗ ಈ ವಿಚಾರ ಬೆಳಕಿಗೆ ಬಂದಿತ್ತು ಅಂದಿನಿಂದ ಕರ್ನಾಟಕದ ಅತ್ಯಂತ ಅಮೂಲ್ಯವಾದ ಪರಂಪರೆಯ ಬ್ರ್ಯಾಂಡ್‌ಗಳಲ್ಲಿ ಒಂದನ್ನು ಪ್ರತಿನಿಧಿಸಲು ಕನ್ನಡ ಮಾತನಾಡದ ನಟಿಯನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಪರ ಗುಂಪುಗಳು, ಸ್ಥಳೀಯ ಕಾರ್ಯಕರ್ತರು ಮತ್ತು ವಿರೋಧ ಪಕ್ಷದ ನಾಯಕರು ಈ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದಾರೆ.
ಸರಕಾರದ ಪ್ರತಿಕ್ರಿಯೆ
ಟೀಕೆಗೆ ಪ್ರತಿಕ್ರಿಯಿಸಿದ ಸರ್ಕಾರ, ಮೈಸೂರು ಸ್ಯಾಂಡಲ್ ಈಗಾಗಲೇ ಕರ್ನಾಟಕದೊಳಗೆ ಬಲವಾದ ಬ್ರಾಂಡ್ ಮರುಸ್ಥಾಪನೆಯನ್ನು ಹೊಂದಿದೆ ಎಂದು ಹೇಳಿದೆ. ಮೈಸೂರು ಸ್ಯಾಂಡಲ್ ಸೋಪ್‌ನ ವ್ಯಾಪ್ತಿಯನ್ನು ಕರ್ನಾಟಕವನ್ನು ಮೀರಿ ವಿಸ್ತರಿಸುವುದು ಮತ್ತು ಅದನ್ನು ರಾಷ್ಟ್ರೀಯ ಮತ್ತು ಜಾಗತಿಕ ಬ್ರ್ಯಾಂಡ್ ಆಗಿ ಸ್ಥಾನ ನೀಡುವುದು ಇದರ ಉದ್ದೇಶ ಎಂದು ತಿಳಿಸಿದೆ.