11 August 2025 | Join group

ರಶ್ಮಿಕಾ ಮಂದಣ್ಣ ಖರೀದಿಸಿದ ಐಷಾರಾಮಿ ಕಾರಿನ ಬೆಲೆ ನೋಡಿದರೆ ನೀವು ದಂಗಾಗಿಬಿಡುತ್ತೀರಿ!

  • 31 Mar 2025 12:55:37 PM

ರಶ್ಮಿಕಾ ಮಂದಣ್ಣ ಅತ್ಯಂತ ಯಶಸ್ವೀ ನಟಿಗಳಲ್ಲಿ ಒಬ್ಬರು. ಇತ್ತೀಚಿನ ದಿನಗಳಲ್ಲಿ ಒಂದರ ಮೇಲೊಂದು ಹಿಟ್ ಸಿನಿಮಾಗಳನ್ನು ನೀಡುವ ರಶ್ಮಿಕಾ ಈಗ ಸಲ್ಮಾನ್ ಖಾನ್ ರವರ ಜೊತೆ ಬಾಲಿವುಡ್ ಸಿನಿಮಾ ಸಿಖಂದರ್ ನಲ್ಲಿ ನಟಿಸಿ ಮತ್ತಷ್ಟು ಹೆಸರು ಗಳಿಸಿದ್ದಾರೆ.

 

ಇತ್ತೀಚೆಗೆ ರಶ್ಮಿಕಾ ನಟಿಸಿರುವ ಮೂರು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ನೀಡಿದ ಬೆನ್ನಲ್ಲೇ ರಶ್ಮಿಕಾ ಅವರ ಸಂಭಾವನೆಯೂ ಹೆಚ್ಚಳವಾಗಿದೆ. ಅದಕ್ಕೆ ತಕ್ಕಂತೆ ರಶ್ಮಿಕಾ ಅವರ ಜೀವನಶೈಲಿಯೂ ಬದಲಾಗಿದೆ.

 

ಕನ್ನಡ ಸಿನಿಮಾದ ಮೂಲಕ ಸಿನೆಮಾ ಜಗತ್ತಿಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಈಗ ಬಹಳ ಬೇಡಿಕೆಯ ಸಿನೆಮಾ ತಾರೆ. ಹೆಚ್ಚು ಹಿಟ್ ಸಿನಿಮಾಗಳಲ್ಲಿ ನಟಿಸುವ ರಶ್ಮಿಕಾ ಮಂದಣ್ಣ ಇದೀಗ ಐಶಾರಾಮಿ ಕಾರೊಂದನ್ನು ಖರೀದಿಸಿದ್ದಾರೆ. ಕಾರಿನ ಬೆಲೆ ಮತ್ತು ಅದರಲ್ಲಿರುವ ಸೌಲಭ್ಯಗಳನ್ನು ನೋಡಿ ಜನ ಬೆರಗಾಗಿದ್ದಾರೆ.

 

ಹೌದು, ರಶ್ಮಿಕಾ ಮಂದಣ್ಣ ಕಪ್ಪು ಬಣ್ಣದ ಮರ್ಸಿಡೀಸ್ ಎಸ್ 450 ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಬೆಲೆ ಸುಮಾರು 2.25 ಕೋಟಿ ರೂಪಾಯಿ ಆಗಿದೆಯಂತೆ. ಈ ಐಶಾರಾಮಿ ಕಾರಿನಲ್ಲಿ ಹಲವು ಉನ್ನತ ವರ್ಗದ ಸೌಲಭ್ಯಗಳು, ಸೌಕರ್ಯಗಳು ಹಾಗೂ ಸುರಕ್ಷಿತ ವೈಶಿಷ್ಟ್ಯಗಳು ತುಂಬಾ ಆಧುನಿಕ ತಂತ್ರಜ್ಞಾನದಾಗಿದೆ.

 

ಇತ್ತೀಚಿಗೆ ನಟಿ ಕಾರಿನಲ್ಲಿ ಬಂದಿಳಿದ ದೃಶ್ಯ ನೋಡಿ ರಶ್ಮಿಕಾ ಫ್ಯಾನ್ಸ್ ಫಿದಾ ಆಗಿದ್ದರೆ. ರಶ್ಮಿಕಾ ನಟಿಸಿದ ಇತ್ತೀಚಿನ ಮೂರು ಸಿನಿಮಾಗಳ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಮೂರು ಸಾವಿರ ಕೋಟಿಗಿಂತ ಮೀರಿದೆಯಂತೆ.