31 January 2026 | Join group

ರಾಜ್ ಬಿ ಶೆಟ್ಟಿಯ 'ಸು ಫ್ರಮ್ ಸೋ' ಸಿನಿಮಾ ನಾಳೆ ತೆರೆಗೆ : ಪ್ರೀಮಿಯರ್ ಶೋ ನೋಡಿ ಹೊಗಳಿದ ಪ್ರೇಕ್ಷಕರು

  • 24 Jul 2025 12:29:30 AM

ರಾಜ್ ಬಿ ಶೆಟ್ಟಿಯವರ ಹಾರರ್ ಕಾಮಿಡಿ ಶೈಲಿಯ ಜೆಪಿ ತುಮಿನಾಡ ನಿರ್ದೇಶನದ 'ಸು ಫ್ರಮ್ ಸೋ' ಸಿನಿಮಾ ತಯಾರಾಗಿದ್ದು, ಈಗಾಗಲೇ ಪ್ರೀಮಿಯರ್ ಶೋ ಮುಗಿಸಿದೆ. ಸಿನಿಮಾ ಜುಲೈ 25ರಂದು ಥಿಯೇಟರ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ. ಮಂಗಳೂರು ಮತ್ತು ಶಿವಮೊಗ್ಗದಲ್ಲಿ 'ಸು ಫ್ರಮ್ ಸೋ' ಸಿನಿಮಾದ ಪ್ರೀಮಿಯರ್ ಶೋ ಆಗಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

 

ಚಿತ್ರದ ಪ್ರೀಮಿಯರ್ ಶೋ ಬಗ್ಗೆ ರಾಜ್ ಬಿ ಶೆಟ್ಟಿ ಮಾತನಾಡಿದ್ದಾರೆ. " ನಾವು ಏನೇ ಮಾಡಿದರು ಜನರ ಮುಂದೆ ಇಡಬೇಕು. ಒಂದು ಮೊಟ್ಟೆಯ ಕಥೆ ಮಾಡುವಾಗ ರಿಸ್ಕ್ ಅಂದಿದ್ದರು, ಆದರೂ ನಾನು ಆ ಚಿತ್ರ ಮಾಡಿದೆ. ನಾವು ಪ್ರೊಮೋಟರ್ ಗಳಲ್ಲ, ನಾವು ಸಿನಿಮಾ ಮಾಡುವವರು. ನನಗೆ ಹಳೆ ಪ್ರಮೋಷನ್ ಸ್ಟೈಲ್ ಇಷ್ಟ ಆಗಲ್ಲ ಎಂದು ಸಿನಿಮಾ ಪ್ರಮೋಷನ್ ಬಗ್ಗೆ ತಿಳಿಸಿದ್ದಾರೆ.

 

ಸಂದರ್ಶನದಲ್ಲಿ ಮುಂದಕ್ಕೆ ಮಾತನಾಡಿ "ನಮ್ಮ ಸಿನಿಮಾ ಬಗ್ಗೆ ಹೇಳುವುದರ ಬದಲು ಸಿನಿಮಾನೇ ತೋರಿಸಬಹುದಲ್ವಾ ಎಂದು ನುಡಿದ್ದಾರೆ. ರಾಜ್ ಬಿ ಶೆಟ್ಟಿ ಯವರು ಈ ಮೂಲಕ ದೊಡ್ಡ ಬದಲಾವಣೆ ತರುವ ಪ್ರಯತ್ನದಲ್ಲಿದ್ದಾರೆ. ಯಾವಾಗಲು ಹೊಸ ರೀತಿಯ ಸಿನಿಮಗಳನ್ನು ಪ್ರೇಕ್ಷಕರಿಗೆ ನೀಡುವ ರಾಜ್, 'ಸು ಫ್ರಮ್ ಸೋ' ಸಿನಿಮಾಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ ಎಂಬುದುನ್ನು ಕಾದು ನೋಡಬೇಕಾಗಿದೆ.