23 October 2025 | Join group

ಕಾಂತರ ಚಾಪ್ಟರ್ 1 ಸಿನಿಮಾದ ನಟಿ ರುಕ್ಮಿಣಿ ವಸಂತ್ ರವರ ತಂದೆಯ ಬಲಿದಾನದ ಬಗ್ಗೆ ನಿಮಗೆ ಗೊತ್ತೇ?

  • 05 Oct 2025 04:31:58 PM

ಕಾಂತರ ಚಾಪ್ಟರ್ 1 ಸಿನಿಮಾದಲ್ಲಿ ನಟಿಸಿರುವ ರುಕ್ಮಿಣಿ ವಸಂತ್ ತಮ್ಮ ನಟನೆಗೆ ಪ್ರೇಕ್ಷಕರಿಂದ ಪ್ರಶಂಸೆಗೆ ಒಳಗಾಗಿದ್ದಾರೆ. ಆದರೆ ಬಹಳಷ್ಟು ಜನ ಅವರ ತಂದೆ ದೇಶಕ್ಕಾಗಿ ಮಾಡಿದ ಬಲಿದಾನ ಗೊತ್ತಿರಲು ಸಾಧ್ಯವಿಲ್ಲ. 

 

ನಟಿ ರುಕ್ಮಿಣಿ ವಸಂತ್ ತಂದೆ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದರು. ಕರ್ನಲ್ ವಸಂತ್ ವೇಣುಗೋಪಾಲ್ ಅವರು 2007 ರಲ್ಲಿ ಜಮ್ಮು-ಕಾಶ್ಮೀರದ ಯುರಿ ಸೆಕ್ಟರ್‌ನಲ್ಲಿ ನುಸುಳುಕೋರರನ್ನು ತಡೆಯುವ ವೇಳೆ ಶಹೀದರಾದರು.

 

ಅವರ ಧೈರ್ಯ ಮತ್ತು ಸಾಹಸಕ್ಕೆ ಮರಣೋತ್ತರವಾಗಿ ಭಾರತ ಸರ್ಕಾರವು ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಲ್ ವಸಂತ್ ವೇಣುಗೋಪಾಲ್ ಕರ್ನಾಟಕದ ಮೊದಲ ಅಶೋಕ ಚಕ್ರ ಪುರಸ್ಕೃತ ಯೋಧರು.

 

ಇದೀಗ ಅವರ ಪುತ್ರಿ ರುಕ್ಮಿಣಿ ವಸಂತ್ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಪ್ರಸಿದ್ಧಿ ಪಡೆದಿದ್ದಾರೆ.

 

ಕರ್ನಲ್ ವಸಂತ್ ವೆಣುಗೋಪಾಲ್ ಅವರ ಧೈರ್ಯ ಮತ್ತು ಸೇವೆಯು ದೇಶದ ಇತಿಹಾಸದಲ್ಲಿ ಶಾಶ್ವತವಾಗಿ ಸ್ಮರಣೀಯವಾಗಿದೆ.