23 October 2025 | Join group

ವಿಜಯ ರಾಘವೇಂದ್ರ ನಟಿಸಿರುವ 'ರಿಪ್ಪನ್ ಸ್ವಾಮಿ' ಸಿನಿಮಾ ಇದೀಗ ಅಮೆಜಾನ್ ಪ್ರೈಮ್ ನಲ್ಲಿ

  • 12 Oct 2025 08:15:05 PM

ವಿಜಯ್ ರಾಘವೇಂದ್ರ ಮತ್ತು ನಾಯಕಿಯಾಗಿ ಅಶ್ವಿನಿ ಚಂದ್ರಶೇಖರ್ ನಟಿಸಿರುವ, ಪಂಚಾನನ ಫಿಲಂಸ್‌ ರವರ ಮೊದಲ ಸಿನಿಮಾ ರಿಪ್ಪನ್ ಸ್ವಾಮಿ' ಇದೀಗ ಅಮೆಜಾನ್ ಪ್ರೈಮ್ ನಲ್ಲಿ ಬರುತ್ತಿದೆ. 

 

ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಅವರು ಸಂಗೀತ ನೀಡಿದ್ದು, ರಂಗನಾಥ್ ಸಿ ಎಂ ಕ್ಯಾಮೆರಾ ಸಂಭಾಲಿಸಿದ್ದಾರೆ. ಸಂಕಲನವನ್ನು ಶಶಾಂಕ್ ನಾರಾಯಣ್ ಮಾಡಿದ್ದಾರೆ. ಆಗಸ್ಟ್ 29ಕ್ಕೆ ರಿಪ್ಪನ್ ಸ್ವಾಮಿ ಚಿತ್ರ ಚಲನಚಿತ್ರ ಮಂದಿರಗಳಲ್ಲಿ ತೆರೆಕಂಡಿದ್ದು, ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆ ದೊರೆತಿದೆ.

 

ಈ ಹಿಂದೆ ಮಾಲ್ಗುಡಿ ಡೇಸ್ ನಿರ್ದೇಶಿಸಿದ್ದ ಯುವ ನಿರ್ದೇಶಕ ಕಿಶೋರ್ ಮೂಡಬಿದ್ರೆ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರು ವಿಭಿನ್ನ ರಾ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ