11 August 2025 | Join group

ಪೆರ್ನೆ : ಸಪರಿವಾರ ಶ್ರೀ ವ್ಯಾಘ್ರ ಚಾಮುಂಡಿ ದೇವಸ್ಥಾನ ಕೊರತಿಕಟ್ಟೆ ಮಾಡತ್ತಾರುವಿನಲ್ಲಿ ನೇಮೋತ್ಸವದ ಸಂಭ್ರಮ.

  • 20 Feb 2025 11:08:12 AM

Perne : ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಕೊರತ್ತಿಕಟ್ಟೆ ಮಾಡತ್ತಾರುವಿನಲ್ಲಿರುವ ಸಪರಿವಾರ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಜಾತ್ರೋತ್ಸವದ ಪರ್ವ. ಇದೇ ಬರುವ ಫೆಬ್ರವರಿ 21, 2025 ನೇ ಶುಕ್ರವಾರದಂದು ಪ್ರತಿಷ್ಠ ಮಹೋತ್ಸವ ಮತ್ತು ದೈವಗಳ ನೇಮೋತ್ಸವದ ಭಕ್ತಿ ಸಡಗರ ನಡೆಯಲಿದೆ.

 

ಕಾರ್ಯಕ್ರಮಗಳ ವಿವರ :

ಬೆಳಿಗ್ಗೆ 8.30 ಗಂಟೆಯಿಂದ ವೈದಿಕ ವಿಧಿ ವಿಧಾನ ನೆರವೇರಲಿದೆ. 


ಬೆಳಗ್ಗೆ 10.00 ಗಂಟೆಗೆ ಸರಿಯಾಗಿ ಬೃಹತ್ ಹಸಿರುವಾಣಿ ಹೊರ ಕಾಣಿಕೆ ಸಮರ್ಪಣೆ.


ಮದ್ಯಾಹ್ನದ ಮತ್ತು ರಾತ್ರಿ ಹೊತ್ತು ಸೇರಿದ ಭಕ್ತಾದಿಗಳಿಗೆ ಅನ್ನ ಪ್ರಸಾದ ಸೇವೆ.


ರಾತ್ರಿ 8.30 ಗೆ ಸರಿಯಾಗಿ ಧರ್ಮ ದೊಂಪದದ ಕೆಳಗೆ ಸಪರಿವಾರ ದೈವಗಳಿಗೆ ನರ್ತನ ಸೇವೆ ನಡೆಯಲಿದೆ.

 

ಈ ಎಲ್ಲಾ ಭಕ್ತಿಯ ಕಾರ್ಯಕ್ರಮದಲ್ಲಿ ಊರ ಪರವೂರ ಸಮಸ್ತ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಯನ್ನು ಮಾಡಿಕೊಂಡಿದ್ದಾರೆ.

 

ತಾರೀಕು 13 ಫೆಬ್ರವರಿ 2025 ನೇ ಗುರುವಾರ ಬೆಳಿಗ್ಗೆ 7.00 ಗಂಟೆಗೆ ಸರಿಯಾಗಿ ಮಾಡತ್ತಾರು ಕ್ಷೇತ್ರದ ಭಂಡಾರದ ಮನೆಯಾದ ಅತ್ತೆಜಾಲುವಿನಲ್ಲಿ ನೇಮೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮ ನೆರವೇರಿತ್ತು.