ಕಲ್ಲಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಲ್ಲಡ್ಕ ವಲಯ ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಕಲ್ಲಡ್ಕ ಘಟಕ, ಗ್ರಾಮ ಪಂಚಾಯತ್ ಬಾಳ್ತಿಲ ಮತ್ತು ಗೋಳ್ತಮಜಲು, ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಕಲ್ಲಡ್ಕ, ಹಸಿರು ಸೇವಾದಳ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಹಾಗೂ ಸ್ಥಳೀಯ ಸಂಘಟನೆಗಳ ಸಾಕಾರದೊಂದಿಗೆ ಕಲ್ಲಡ್ಕ ಪೇಟೆಯ ಸ್ವಚ್ಛತಾ ಕಾರ್ಯಕ್ರಮ ಡಿಸೆಂಬರ್ 14 ಭಾನುವಾರ ನಡೆಯಿತು.
ಈ ಸಂದರ್ಭದಲ್ಲಿ ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರೇಮ, ಚಂದ್ರಶೇಖರ್ ಪೂಜಾರಿ ಚೆಂಡೆ, ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷರು ಯತಿನ್ ಏಳ್ತಿಮಾರ್, ಕಾರ್ಯದರ್ಶಿ ವಜ್ರನಾಥ್ ಉತ್ಸವ ಸಮಿತಿ ಅಧ್ಯಕ್ಷರಾದ ಯೋಗೀಶ್ ಹಾಗೂ ಸರ್ವ ಸದಸ್ಯರು, ಗೋಳ್ತಮಜಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕರಾದ ಸುಖರಾಜ್, ಸೇವಾ ಪ್ರತಿನಿಧಿ ವಿದ್ಯಾ, ಗ್ರಾಮ ಪಂಚಾಯತ್ ಸದಸ್ಯರಾದ ಲತೀಶ್, ಶೌರ್ಯ ತಂಡದ ಅಧ್ಯಕ್ಷರು ಮಾಧವ ಸಾಲಿಯಾನ, ಹಾಗೂ ಸದಸ್ಯರು, ಮಣಿಕಂಠ ಯುವಶಕ್ತಿ ಸದಸ್ಯರು ಆಶೀರ್ವಾದ ಸಂಜೀವಿನಿ ತಂಡ ಸದಸ್ಯರು ಪಾಲ್ಗೊಂಡಿದ್ದರು.





