ಕಡೇಶಿವಾಲಯ, ಬಂಟ್ವಾಳ: ಮಹಾತೋಬಾರ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ, ಕಡೇಶಿವಾಲಯದ ಶ್ರೀ ಲಕ್ಷ್ಮೀ ಕೃಪಾ ಸಭಾಂಗಣ ದಲ್ಲಿ ದಿನಾಂಕ 11-01-2026ನೇ ರವಿವಾರ ಬೆಳಿಗ್ಗೆ ಗಂಟೆ 10-30ಕ್ಕೆ ದೇವಸ್ಥಾನದ ಜೀರ್ಣೋದ್ದಾರ ದ ವಿಜ್ಞಾಪನಾ ಪತ್ರ ಬಿಡುಗಡೆಗೊಂಡಿತು.
ಸಮಾರಂಭದ ಸಭಾ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಮುಂಬೈಯ ಉದ್ಯಮಿ, ಕೊಡುಗೈ ದಾನಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಶ್ರೀ ಕುಸುಮೋಧರ ಡಿ ಶೆಟ್ಟಿ ಯವರು ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿ ಮಾತನಾಡುತ್ತಾ "ಅಂದು ಶ್ರೀಲಂಕಾಕ್ಕೆ ಹನುಮಂತ ಸೇತುವೆ ನಿರ್ಮಿಸುವಾಗ ಅಳಿಲು ಮಾಡಿದ ಸೇವೆಯಂತೆ ನೀವೆಲ್ಲರೂ ನಮ್ಮ ಜೊತೆ ಕೈ ಜೋಡಿಸಿದರೆ ಖಂಡಿತಾ 1ವರ್ಷ ದಲ್ಲಿ ಈ ದೇವಸ್ಥಾನ ಜೀರ್ಣೋದ್ದಾರಗೊಳ್ಳಲು ಸಾಧ್ಯ "ಎಂದು ನುಡಿದರು.
ವೇದಿಕೆಯಲ್ಲಿ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷರಾದ ಡಾ. ಶ್ರೀಪತಿ ರಾವ್ ದಾಳಿಂಬ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಪುರುಷೋತ್ತಮ್ ಶೆಟ್ಟಿ ನುಳಿಯಲು, ಶ್ರೀ ಅಮರನಾಥ ಅಜಿಲ ಅರಿಕಲ್ಲು, ದೇವಸ್ಥಾನದ ಅರ್ಚಕರಾದ ಶ್ರೀ ಹರಿಪ್ರಸಾದ್ ಭಟ್ ಮುಂಗೂರು, ಮೋಹನ್ ರೈ ಕರ್ನುರ್, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ನ ಸದಸ್ಯರು ಶ್ರೀ ರವಿ ಶಂಕರ್ ಶೆಟ್ಟಿ ಬಡಾಜೇಗುತ್ತು, ಲೀಲೇಶ್ ಆರ್ ಶೆಟ್ಟಿ ಪಾಂಡಿಬೆಟ್ಟು, ನಾರಾಯಣ ನಾಯ್ಕ್ ಮುಂಬೈ, ಉತ್ತಮ ಶೆಟ್ಟಿ ಬೆಂಗಳೂರು, ಪ್ರದೀಪ್ ಕುಮಾರ್ ಶೆಟ್ಟಿ, ನವೀನ್ ಕುಮಾರ್ ಇಸ್ರೋ ಬೆಂಗಳೂರು, ಬಾಲಕೃಷ್ಣ ನಾಯ್ಕ್ , ಸುಧೀರ್ ಶೆಟ್ಟಿ ಮುಂಬೈ, ಪ್ರಹ್ಲಾದ್ ಶೆಟ್ಟಿ ಜಡ್ತಿಲ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಚಿದಾನಂದ ಕಡೇಶಿವಾಲಯ, ಸಂಜೀವ ಪೂಜಾರಿ ದಾಸಕೋಡಿ, ಪ್ರೇಮ ಯಸ್ ಶೆಟ್ಟಿ ಮಿತ್ತಿಮಾರು, ದೊಡ್ಡರಂಗ ಪೂಜಾ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಕೂಸಪ್ಪ ಪೂಜಾರಿ ಪುನುಕೇದಡಿ, ಮೋಹನ್ ನೆತ್ತರ, ಜಯರಾಮ್ ಶೆಟ್ಟಿ ಕೆರೆಮೂಳೆ, ಚಂದ್ರಶೇಖರ ಶೆಟ್ಟಿ ಕುರುoಬಲಾಜೆ , ಸುಂದರ ರೈ ಕುರುoಬಲಾಜೆ, ರಮೇಶ್ ಕೆ ರಥ ಬೀದಿ, ಮೋಹನ್ ಕುಮಾರ್ ಕಲ್ಲಾಜೆ, ದಯಾನಂದ ಶೆಟ್ಟಿ ನಡ್ಯಾಲು, ಕಿರಣ್ ಶೆಟ್ಟಿ ನಡ್ಯಾಲು, ವಿಜಯ ಕುಮಾರ್ ಕಲ್ಲಾಜೆ, ನವೀನ್ ಚಂದ್ರ ಶೆಟ್ಟಿ ಭಾವ ಗುತ್ತು, ಚಂದ್ರಾಯ ಪೂಜಾರಿ, ಸಂಜೀವ ಶೆಟ್ಟಿಗಾರ್, ಪುಷ್ಪಲತಾ ಚಿನ್ನಯ ಕಟ್ಟೆ, ಶುಭಧ ಶೆಟ್ಟಿ ಕಲ್ಲಾಜೆ, ಶಾಲಿನಿ ಬುಡೋಲಿ ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಸಿದ್ದರು.
ವ್ಯವಸ್ಥಾಪನ ಸಮಿತಿಯ ಸದಸ್ಯ ಈಶ್ವರ ಪೂಜಾರಿ ಹಿರ್ತಡ್ಕ ಸ್ವಾಗತಿಸಿ, ಹರಿಶ್ಚಂದ್ರ ಕಾಡಬೆಟ್ಟು ವಂದಿಸಿದರು, ವ್ಯವಸ್ಥಾಪನ ಸಮಿತಿಯ ಸದಸ್ಯ ಶೀನ ನಾಯ್ಕ್ ನೆಕ್ಕಿಲಾಡಿ ಕಾರ್ಯಕ್ರಮ ನಿರೂಪಿಸಿದರು.





