31 January 2026 | Join group

ಶ್ರೀಮಂತ್ರ ದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆಮಾರು ವಾರ್ಷಿಕ ಕೋಲೊತ್ಸವದ ಸಂಭ್ರಮ

  • 14 Jan 2026 12:19:04 AM

ಬಂಟ್ವಾಳ: ತಾಲೂಕಿನ ಅಮ್ಟೂರು ಗ್ರಾಮದ ಶ್ರೀಮಂತ್ರ ದೇವತಾ ಕ್ಷೇತ್ರ ಸಾನಿಧ್ಯ ಕಟ್ಟೆಮಾರ್ ನಲ್ಲಿ ಶ್ರೀಮಂತ್ರ ದೇವತೆ, ಸ್ವಾಮಿ ಕೊರಗಜ್ಜ, ಮತ್ತು ಶ್ರೀಗುಳಿಗ ದೈವಗಳ ವೈಭವದ ವಾರ್ಷಿಕ ಕೋಲೊತ್ಸವ ದಿನಾಂಕ 17-01-2026 ಶನಿವಾರದಿಂದ 20-1-2026 ಮಂಗಳವಾರ ತನಕ ನಡೆಯಲಿರುವುದು.

 

ದಿನಾಂಕ 17-01-2026 ನೇ ಶನಿವಾರ ಬೆಳಿಗ್ಗೆ ಗಣಹೋಮ, ಸಂಜೆ ಗಂಟೆ 5 ರಿಂದ ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ಜರಗಲಿರುವುದು.

 

ದಿನಾಂಕ 18-01-2026 ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 7 ರಿಂದ ಸಾಯಂಕಾಲ ಗಂಟೆ 5 ರ ತನಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನ ಕಾರ್ಯಕ್ರಮ, ನಂತರ ಶ್ರೀ ಚಿಂತಾಮಣಿ ಡ್ಯಾನ್ಸ್ ಗ್ರೂಪ್ ಕಡೇಶಿವಾಲಯ ಇವರಿಂದ ಹನುಮಾನ್ ಫ್ರೆಂಡ್ಸ್ ಅಮ್ಟೂರು ಪ್ರಾಯೋಜಕತ್ವದಲ್ಲಿ ಭಕ್ತಿ ಪ್ರಧಾನ ಕಾರ್ಯಕ್ರಮ, ರಾತ್ರಿ ಗಂಟೆ 7-30 ರಿಂದ ಶ್ರೀ ಮೋಹನ್ ರಾಜ್ ಚೌಟ ಪಂಚೋಳಿಮಾರು ಗುತ್ತು ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಮಧ್ಯ ಪ್ರದೇಶ ಉಜ್ಜಯಿನಿಯ ಮಠಾದೀಶ್ ಪರಮಪೂಜ್ಯ ಯೋಗಿಪೀರ್ ರಾಮನಾಥ್ ಜಿ ಮಹಾರಾಜ್ ಆಶೀರ್ವಚನ ನೀಡಲಿರುವರು.

 

ಈ ಸಂದರ್ಭದಲ್ಲಿ ಶ್ರೀ ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಶ್ರೀ ರಾಮ ಮಂದಿರ ಮತ್ತು ಸ್ವಾಮಿ ಕೊರಗಧ್ಯಕ್ಷೇತ್ರ ಉರ್ವದ ಅಧ್ಯಕ್ಷ ರಾಜೇಶ್ ಉರ್ವ, ಬನ್ನಿ ಪೇಟೆ ವಾರ್ಡ್ ಮಾಗಡಿ ಬೆಂಗಳೂರಿನ ಮಾಜಿ ಕೌನ್ಸಿಲರ್ ಬಿ ಟಿ ಎಸ್ ನಾಗರಾಜ್, ಬೆಂಗಳೂರಿನ ವಕೀಲ ಚಂದ್ರಪ್ರಸಾದ್ ಕೆ ಆರ್, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ರಾಜೇಶ್ ಎಲ್, ಶ್ರೀ ಕೃಷ್ಣ ಎಲೆಕ್ಟ್ರಿಕಲ್ಸ್ ಕಡಬದ ಅಭಿಲಾಷ್, ಗೌರೀಶ್ ಬೆಂಗಳೂರು, ನವೀನ್ ರೆಡ್ಡಿ ಬೆಂಗಳೂರು, ಹರೀಶ್ ಶೆಟ್ಟಿ ಮುಂಬಯಿ, ಕಾರ್ತಿಕ್ ರೆಡ್ಡಿ, ಉದಯಕುಮಾರ್ ಶೆಟ್ಟಿ ಕಿದಿಯೂರು ಮೊದಲಾದವರು ಅತಿಥಿಗಳಾಗಿ ಉಪಸ್ಥಿತರಿರುವರು.

 

ರಾತ್ರಿ ಗಂಟೆ 9:30ಕ್ಕೆ ಸರಿಯಾಗಿ ದೊಂದಿ ಬೆಳಕಿನಲ್ಲಿ ಶ್ರೀ ಮಂತ್ರ ದೇವತೆ ದೈವದ ವೈಭವದ ವಾರ್ಷಿಕ ಕೋಲೋತ್ಸವ ಜರಗಲಿರುವುದು. ದಿನಾಂಕ 19-01-2026 ನೇ ಸೋಮವಾರ ಸಂಜೆ 7:00ಗೆ ಸ್ವಾಮಿ ಕೊರಗಜ್ಜ ಮತ್ತು ಶ್ರೀ ಗುಳಿಗ ದೈವಗಳ ವಾರ್ಷಿಕ ಕೋಲೋತ್ಸವ ಜರಗಲಿರುವುದು. ದಿನಾಂಕ 20-01-2026 ನೇ ಮಂಗಳವಾರ ರಾತ್ರಿ ದೈವಗಳಿಗೆ ಅಗೇಲುಸೇವೆ ಜರಗಲಿರುವುದು.

 

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಭಾಗವಹಿಸಿ ದೈವದ ಗಂಧ ಪ್ರಸಾದ ಸ್ವೀಕರಿಸಿ ದೈವದ ಕೃಪೆಗೆ ಪಾತ್ರರಾಗಬೇಕಾಗಿ ಕಟ್ಟೆಮಾರು ಕ್ಷೇತ್ರದ ಧರ್ಮದರ್ಶಿ ಮನೋಜ್ ಕುಮಾರ್ ಕಟ್ಟೆಮಾರು ತಿಳಿಸಿರುತ್ತಾರೆ.