ಕರ್ನಾಟಕಕ್ಕೆ ತಂದುಕೊಟ್ಟ ಬೂಕರ್ ಪ್ರಶಸ್ತಿ : ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿಗೆ ಸನ್ಮಾನ, ತಲಾ 10 ಲಕ್ಷ ರೂ ಘೋಷಣೆ

  • 03 Jun 2025 11:49:39 AM

ಬೆಂಗಳೂರು: ಕನ್ನಡಕ್ಕೆ ಮೊದಲ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ತಂದುಕೊಟ್ಟ ವಕೀಲರು ಮತ್ತು ಸಾಹಿತಿ ಬಾನು ಮುಷ್ತಾಕ್ ಅವರಿಗೆ ಕರ್ನಾಟಕ ಸರಕಾರ ಸನ್ಮಾನಿಸಿದೆ. ಈ ಕಥೆಯನ್ನು ಅನುವಾದಕಿ ದೀಪಾ ಭಸ್ತಿ ಅವರನ್ನು ಕೂಡ ಸರಕಾರದ ವತಿಯಿಂದ ಸಿಎಂ ಸಿದ್ದರಾಮಯ್ಯ ಸನ್ಮಾನಿಸಿದ್ದಾರೆ.

 

ಕನ್ನಡಕ್ಕೆ ಮೊಲದ ಬೂಕರ್ ಪ್ರಶಸ್ತಿ ಇಡೀ ಕರ್ನಾಟಕಕ್ಕೆ ಮಾತ್ರವಲ್ಲದೆ, ದೇಶಕ್ಕೆ ಹೆಮ್ಮೆಯ ವಿಚಾರ. ಇದೀಗ ಕರ್ನಾಟಕ ಸರಕಾರ ಇಬ್ಬರಿಗೂ ತಲಾ 10 ಲಕ್ಷ ರೂ ಪುರಸ್ಕಾರ ಘೋಷಿಸಿದೆ.

 

ಹಾಗೆಯೇ ಬಾನು ಅವರ ಕತೆಗಳನ್ನು ಇಂಗ್ಲಿಷಿಗೆ ಪ್ರಕಟಿಸಲು ಅನುವಾದಕ್ಕೂ ಸರಕಾರದ ನೆರವು ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

 

'ಎದೆಯ ಹಣತೆ' ಕೃತಿಗೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿಗೆ ಭಾಜನರಾದ ಸಾಹಿತಿ ಬಾನು ಮುಷ್ತಾಕ್ ಹಾಗೂ ಕೃತಿಯ ಅನುವಾದಕಿ ದೀಪಾ ಭಸ್ತಿ ಅವರನ್ನು ಸಿಎಂ ಅವರು ಸನ್ಮಾನಿಸಿದ್ದಾರೆ.