23 October 2025 | Join group

ಬಜಪೆ ಶಾರದೋತ್ಸವ 2025: ಅಕ್ಟೋಬರ್ 1ರಂದು ಪ್ರಥಮ ವರ್ಷದ ಅದ್ದೂರಿ ಪಿಲಿನಲಿಕೆ

  • 29 Sep 2025 11:49:52 AM

ಬಜಪೆ: ಫ್ರೆಂಡ್ಸ್ ಬಜಪೆ ವತಿಯಿಂದ, ಬಜಪೆ ಟೈಗರ್ಸ್ ನೇತೃತ್ವದಲ್ಲಿ 33ನೇ ವರ್ಷದ ಬಜಪೆ ಶಾರದೋತ್ಸವದ ಅಂಗವಾಗಿ, ಬಜಪೆ ಶಾರದಾ ಮಂಟಪದ ಮುಂಭಾಗದಲ್ಲಿ ಇದೇ ಅಕ್ಟೋಬರ್ 01, 2025 ರಂದು ಸಂಜೆ 3:00 ಗಂಟೆಗೆ ಪ್ರಥಮ ವರ್ಷದ 'ಅದ್ದೂರಿ ಪಿಲಿನಲಿಕೆ ' ವಿಜೃಂಭಣೆಯಿಂದ ನಡೆಯಲಿದೆ.

 

ಇದೇ ವೇಳೆ, ಸೆಪ್ಟೆಂಬರ್ 30, 2025 ರಂದು ಸಂಜೆ 7:00 ಗಂಟೆಗೆ 'ಊದುಪೂಜೆ' ಕಾರ್ಯಕ್ರಮವೂ ನೆರವೇರಲಿದೆ.

 

ಈ ಎಲ್ಲಾ ಸಮಾರಂಭಗಳಿಗೆ ಸಮಸ್ತ ಭಾಂದವರನ್ನು ಸಾದರವಾಗಿ ಆಹ್ವಾನಿಸಲಾಗಿದೆ.