ಕಲ್ಲಡ್ಕ: ನಾಗಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ವತಿಯಿಂದ 'ಕಲ್ಲಡ್ಕದ ಪಿಲಿ 2025', ಊದುಪೂಜೆ ಹಾಗೂ ನಿತ್ಯರಕ್ಷಾ ಆಂಬುಲೆನ್ಸ್ ಸೇವಾರ್ಪಣೆ ನಡೆಯಿತು. ಒಂದೇ ವೇದಿಕೆಯಲ್ಲಿ ಕಲ್ಲಡ್ಕದ ಎಲ್ಲಾ ವೈದ್ಯಾಧಿಕಾರಿಗಳ ಸಂಗಮವಾಗಿರುವುದು ಈ ಕಾರ್ಯಕ್ರಮದ ವಿಶೇಷವಾಗಿತ್ತು
ನಾಗರಾಜ್ ಕಲ್ಲಡ್ಕ ನೇತೃತ್ವದ 'ನಾಗಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ' ವತಿಯಿಂದ 'ಹೋಟೆಲ್ ಲಕ್ಷ್ಮಿ ಗಣೇಶ್' ಕಲ್ಲಡ್ಕದ ಸಹಕಾರದೊಂದಿಗೆ ಯಶಸ್ವಿ ಏಳನೇ ವರ್ಷದ ಕಲ್ಲಡ್ಕದ ಪಿಲಿ -2025 ಸಾಂಪ್ರದಾಯಿಕ ದಸರಾ ಹುಲಿಗಳ ಊದು ಪೂಜೆ ಕಾರ್ಯಕ್ರಮ ಮಂಗಳವಾರ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರದ ರಾಮಾಂಗಣದಲ್ಲಿ ಕಲ್ಲಡ್ಕ ಲಕ್ಷ್ಮಿ ಗಣೇಶ್ ಕೆ ಟಿ ಹೋಟೆಲ್ ಮಾಲಕರಾದ ಎನ್ ರಾಜೇಂದ್ರ ಹೊಳ್ಳ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾಕ್ಟರ್ ಪ್ರಭಾಕರ ಭಟ್ ಕಲ್ಲಡ್ಕ ದಲ್ಲಿ ಸೇವೆ ನೀಡುತ್ತಿರುವ ವೈದ್ಯರುಗಳನ್ನು ಗೌರವಿಸಿ ಮಾತನಾಡಿ, " ಕಲ್ಲಡ್ಕ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೈದ್ಯಾಧಿಕಾರಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟು ಸೇರಿಸಿ ಅವರ ಸಮ್ಮುಖದಲ್ಲಿ ಜನರಿಗೆ ತುರ್ತು ಅಗತ್ಯ ಇರುವಂತಹ ತುರ್ತು ಚಿಕಿತ್ಸೆ ವಾಹನ 'ನಿತ್ಯರಕ್ಷಾ ಆಂಬುಲೆನ್ಸ್" ಸೇವಾರ್ಪಣೆ ಮಾಡುವಂತ ನಾಗ ಸುಜ್ಞಾನ ಫ್ರೆಂಡ್ಸ್ ಕಲ್ಪನೆ ಪ್ರಸಂಶನೀಯವಾದದ್ದು, ಧರ್ಮ ಕಾರ್ಯ ನಿರ್ಭಯವಾಗಿ ನಿತ್ಯ ನಿರಂತರ ನಡೆಯಲಿ" ಎಂದರು. ನಂತರ ಅಂಬುಲೆನ್ಸ್ ಲೋಕರ್ಪಣೆ ಮಾಡಿ ವಾಹನದ ಜವಾಬ್ದಾರಿಯನ್ನು ವಹಿಸಿಕೊಂಡ ಮಿಥುನ್ ಪೂಜಾರಿ ಯವರಿಗೆ ವಾಹನದ ಕೀ ಹಸ್ತಾಂತರಿಸಿದರು. ನಂತರ ಸಾಂಪ್ರದಾಯಿಕ ದಸರಾ ಹುಲಿಗಳ ಊದು ಪೂಜೆ ಕಾರ್ಯಕ್ರಮ ಜರಗಿತು.
ವೇದಿಕೆಯಲ್ಲಿ ಡಾಕ್ಟರ್ ಕಮಲ ಪ್ರಭಾಕರ್ ಭಟ್, ಡಾಕ್ಟರ್ ರೇಷ್ಮಾ ಉಳ್ಳಾಲ್, ಡಾಕ್ಟರ್ ಎಚ್ ರಾಜೀವ ಶೆಟ್ಟಿ, ಡಾಕ್ಟರ್ ಚಂದ್ರಶೇಖರ್, ಡಾಕ್ಟರ್ ಶೈಲೇಂದ್ರ ಎಸ್ ಎಸ್, ಡಾಕ್ಟರ್ ರವಿಕಿರಣ್, ಡಾಕ್ಟರ್ ಮನೋಜ್, ಡಾಕ್ಟರ್ ಕೆ ಆರ್ ಎಸ್ ಕಿನಿಲಾ, ಡಾ ಸುಕೇಶ್ ಕಲ್ಲಡ್ಕ, ಡಾಕ್ಟರ್ ಪ್ರಶಾಂತ್ ಕುಮಾರ್ ಕಲ್ಲಡ್ಕ, ನ್ಯಾಯವಾದಿ ಅರುಣ್ ಶ್ಯಾಮ್, ಗಣಪತಿ ಸ್ವಾಮೀಜಿ, ಮೊದಲಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಮೊದಲು ಕಲಾಮಯಂ ಉಡುಪಿ ಅವರಿಂದ ಜಾನಪದ ಕಲರವ ಎನ್ನುವ ಸಾಂಸ್ಕೃತಿಕ ಕಾರ್ಯಕ್ರಮ, ವೈವಾಹಿಕ ಜೀವನದಲ್ಲಿ ಮೂರು ದಶಕ ಪೂರ್ಣಗೊಳಿಸಿದ ದಂಪತಿಗಳ ಸಂಗಮ "ನಿತ್ಯದಂಪತಿ" ಕಾರ್ಯಕ್ರಮ, 1ರಿಂದ 9 ವರ್ಷದ ಮಕ್ಕಳಿಗೆ "ಬಾಲಭೋಜನ" ಕಾರ್ಯಕ್ರಮ ಜರಗಿತು.
ನಾಗ ಸುಜ್ಞಾನ ಫ್ರೆಂಡ್ಸ್ ನ ಮುಖ್ಯಸ್ಥರಾದ ನಾಗರಾಜ್ ಕಲ್ಲಡ್ಕ ಸ್ವಾಗತಿಸಿ, ಪ್ರದೀಪ್ ಕೆಂಪುಗುಡ್ಡೆ ವಂದಿಸಿದರು. ಕುಮಾರ್ ವಿಟ್ಲ ಹಾಗೂ ಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.