ಬಂಟ್ವಾಳ, ಕಡೇಶಿವಾಲಯ: ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾ ಸಭೆ ನೆರವೇರಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಗೆ ವಿಶೇಷತೆ ತಂದರು.
ಸಭೆಯಲ್ಲಿ ವಿವಿಧ ಕಾರ್ಯಗಳ ಪರಿಶೀಲನೆ ಜೊತೆಗೆ ಸಾಧನೆಗಳನ್ನು ಪರಿಶೀಲಿಸಲಾಯಿತು. ಅದೇ ಸಂದರ್ಭದಲ್ಲಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವ ಸಹಾಯ ಗುಂಪುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸನ್ಮಾನ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಯಿತು.
ಈ ಪೈಕಿ ಕಡೇಶಿವಾಲಯ ಗ್ರಾಮದ ಪೆರ್ಲಾಪು 'ಶ್ರೀ ವಿನಾಯಕ ನವೋದಯ ಸ್ವ ಸಹಾಯ ಗುಂಪು' ಉತ್ತಮ ಗುಂಪು ಎಂದು ಪರಿಗಣಿಸಲ್ಪಟ್ಟಿತು. ಗುಂಪಿನ ಸದಸ್ಯರ ಸತತ ಶ್ರಮ ಮತ್ತು ಶಿಸ್ತಿನ ಕಾರ್ಯನಿರ್ವಹಣೆಯನ್ನು ಗುರುತಿಸಿ, ಸಭೆಯ ವೇದಿಕೆಯಲ್ಲಿ ವಿಶೇಷವಾಗಿ ಗೌರವಿಸಲಾಯಿತು.