23 October 2025 | Join group

24 ವರ್ಷ ಪೂರೈಸಿದ ಶ್ರೀ ಲಕ್ಷ್ಮೀ ನಿಧಿ ನವೋದಯ ಸ್ವ ಸಹಾಯ ಗುಂಪಿಗೆ ಅಭಿನಂದನೆ

  • 04 Oct 2025 08:29:00 PM

ಕಡೇಶಿವಾಲಯ ಗ್ರಾಮದಲ್ಲಿ 02-10-2001ರಂದು ಪ್ರಾರಂಭಗೊಂಡು 24 ವರ್ಷಗಳನ್ನು ಪೂರೈಸಿದ ಏಕೈಕ ಗುಂಪಾದ “ಶ್ರೀ ಲಕ್ಷ್ಮೀ ನಿಧಿ ನವೋದಯ ಸ್ವ ಸಹಾಯ ಗುಂಪು, ಕಲ್ಲಾಜೆ-ಕಡೇಶಿವಾಲಯ”ವನ್ನು 20-09-2025ರಂದು ನಡೆದ ಕಡೇಶಿವಾಲಯ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ, ಬ್ಯಾಂಕಿನ ಹಿರಿಯ ನಿರ್ದೇಶಕರಾದ ತಿರುಮಲೇಶ್ವರ ಭಟ್ ರವರು ಉತ್ತಮ ಗುಂಪು ಎಂದು ಪರಿಗಣಿಸಿ ಅಭಿನಂದಿಸಿದರು.

 

ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ವಿದ್ಯಾಧರ ರೈ, ಉಪಾಧ್ಯಕ್ಷರಾದ ಶಿವಾನಂದ ಡಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಬ್ರಮಣ್ಯ ಪ್ರಸಾದ್, ಬ್ಯಾಂಕಿನ ನಿರ್ದೇಶಕರು ಹಾಗೂ ನವೋದಯ ವಲಯ ಪ್ರೇರಕರಾದ ಡಿ. ಸಂಜೀವ ಪೂಜಾರಿ ಉಪಸ್ಥಿತರಿದ್ದರು.