23 October 2025 | Join group

ಬಂಟ್ವಾಳ : ಅ.10ರಂದು ಬಿ.ಸಿ.ರೋಡ್ ನಲ್ಲಿ ಬೃಹತ್ ಪಂಜಿನ ಮೆರವಣಿಗೆ

  • 09 Oct 2025 04:06:53 PM

ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬಿ.ಸಿ.ರೋಡ್ ಮಿನಿ ವಿಧಾನಸೌಧದ ಮುಂಭಾಗ ಯುವ ಕಾಂಗ್ರೆಸ್ ಬಂಟ್ವಾಳ ಆಯೋಜಿಸಿರುವ ಮತಗಳ್ಳತನದ ವಿರುದ್ಧ ಜನಜಾಗೃತಿ ಹೋರಾಟಕ್ಕೆ ಬೆಂಬಲವಾಗಿ ಪಂಜಿನ ಬೃಹತ್ ಮೆರವಣಿಗೆ ಅಕ್ಟೋಬರ್ 10ರಂದು ನಡೆಯಲಿದೆ.

 

ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದಿಂದ ನಾರಾಯಣಗುರು ಸರ್ಕಲ್ ವರೆಗೆ ಸಾಗಿ, ನಂತರ ಬಿ.ಸಿ.ರೋಡ್ ಮಿನಿ ವಿಧಾನಸೌಧದ ಎದುರು ಸಾರ್ವಜನಿಕ ಸಭೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸಚಿವ ಸಂತೋಷ್ ಲಾಡ್ ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.