ಬಂಟ್ವಾಳ : ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನಿವಾಸಿ ಗ್ರಾಮಾಭಿವೃದ್ಧಿ ಯೋಜನೆಯ ನವಜೀವನ ಸಮಿತಿಯ ಸದಸ್ಯರಾದ ಚಂದ್ರಶೇಖರ್ ಶೆಟ್ಟಿ ಕಲಾವತಿ ದಂಪತಿಗಳ ಪುತ್ರ ಕಿರಣ್ ರವರು ನರ ದೌರ್ಬಲ್ಯ ಕಾಯಿಲೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸಾ ವೆಚ್ಚಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕ್ರಿಟಿಕಲ್ ಫಂಡ್ ಸಹಾಯಧನ ರೂಪಾಯಿ 25,000 /- ಮಂಜೂರಾಗಿದ್ದು, ಮಂಜುರಾತಿ ಪತ್ರವನ್ನು ನರಿಕೊಂಬು 'ಬಿ' ಒಕ್ಕೂಟದ ತ್ರೈಮಾಸಿಕ ಒಕ್ಕೂಟ ಸಭೆಯಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ತುಂಬೆ ವಲಯದ ಮೇಲ್ವಿಚಾರಕಿ ಮಮತಾ ಸಂತೋಷ್, ನರಿಕೊಂಬು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಗಳಾದ ಕುಸುಮಾವತಿ, ಪ್ರತಿಭಾ, ನರಿಕೊಂಬು 'ಬಿ' ಒಕ್ಕೂಟ ಅಧ್ಯಕ್ಷ ಜಯಂತ ಪದಾಧಿಕಾರಿಗಳಾದ ಸುನಿತಾ, ರೂಪ ಉಪಸ್ಥಿತರಿದ್ದರು.