23 October 2025 | Join group

3.5 ವರ್ಷಗಳ ಕಾಯುವಿಕೆಯ ನಂತರ ರಷ್ಯಾದ ಮಹಿಳೆಗೆ ಭಾರತೀಯ ಪೌರತ್ವ – ಮರೀನಾ ಖರ್ಬಾನಿಯ ಸಂತಸದ ಕ್ಷಣ!

  • 12 Oct 2025 12:12:13 PM

ಕೆಲ ಭಾರತೀಯರು ಭಾರತ ಬಿಟ್ಟು ಬೇರೆ ದೇಶದಲ್ಲಿ ನೆಲೆಸಲು ಬಯಸುತ್ತಾರೆ. ಅಲ್ಲಿಯ ಪಾಸ್ ಪೋರ್ಟ್ ಪಡೆಯಲು ಇಲ್ಲ-ಸಲ್ಲದ ಹರಸಾಹಸ ಪಡುತ್ತಾರೆ. ಆದರೆ ವಿದೇಶಿಗರು ಇತ್ತೀಚಿನ ದಿನಗಳಲ್ಲಿ ಭಾರತ ದೇಶದಲ್ಲಿ ತಮ್ಮ ಜೀವನ ಕಳೆಯಲು ಇಚ್ಚಿಸುತ್ತಾರೆ. ಅದೇ ನೆಲೆಯಲ್ಲಿ ಇಲ್ಲೊಬ್ಬ ಮಹಿಳೆ ಬಹಳ ಪ್ರಯತ್ನದ ನಂತರ ಭಾರತದ ಪಾಸ್ ಪೋರ್ಟ್ ಪಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಆಕೆ ವ್ಯಕ್ತ ಪಡಿಸಿದ ಸಂತಸದ ಕ್ಷಣ ಬಿತ್ತರವಾಗಿದೆ.

 

ಭಾರತೀಯನನ್ನು ಮದುವೆಯಾದ ರಷ್ಯಾದ ಮಹಿಳೆ ಮರೀನಾ ಖರ್ಬಾನಿ, ಏಪ್ರಿಲ್ 2025 ರಲ್ಲಿ 3.5 ವರ್ಷಗಳ ಕಾಯುವಿಕೆಯ ನಂತರ ತನ್ನ ಸಾಗರೋತ್ತರ ಭಾರತೀಯ ನಾಗರಿಕ (OCI) ಕಾರ್ಡ್ ಅನ್ನು ಪಡೆದರು. OCI ಪೂರ್ಣ ಪೌರತ್ವವಲ್ಲ ಆದರೆ ದೀರ್ಘಾವಧಿಯ ನಿವಾಸವನ್ನು ನೀಡುತ್ತದೆ. 

 

ಮರೀನಾ ಖರ್ಬಾನಿ ಭಾರತದ ಮೇಘಾಲಯದ ವ್ಯಕ್ತಿ ಕಿಂಟಿವ್ ಖರ್ಬಾನಿ ಅವರನ್ನು ವಿವಾಹವಾಗಿದ್ದರು. ಇದೀಗ ಮರೀನಾ ಭಾರತದ ಪಾಸ್ ಪೋರ್ಟ್ ಹೊಂದಿದ ವಿದೇಶಿ ಮಹಿಳೆಯಾಗಿದ್ದಾರೆ.