23 October 2025 | Join group

ಚಿಕನ್ ಪ್ರಿಯರೇ ಗಮನಿಸಿ: ಆರೋಗ್ಯಕರವಾಗಿರಲು ಕೋಳಿಯ ಈ ಭಾಗಗಳನ್ನು ತಿನ್ನಲೇಬೇಡಿ!

  • 18 Oct 2025 11:03:17 AM

ಚಿಕನ್ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೋಳಿಯ ಮಾಂಸವೆಂದರೆ ಪ್ರೀತಿ. ಆದರೆ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಚಿಕನ್‌ನ ಕೆಲವು ಭಾಗಗಳನ್ನು ಸೇವಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು.

 

ಎಲ್ಲಕ್ಕಿಂತ ಮುಖ್ಯವಾಗಿ, ಕೋಳಿಯ ಕುತ್ತಿಗೆಯ ಭಾಗವನ್ನು (Chicken Neck) ತಿನ್ನುವುದನ್ನು ತಪ್ಪಿಸಿ. ಕೋಳಿಯ ಕುತ್ತಿಗೆಯಲ್ಲಿರುವ ದುಗ್ಧರಸ ಗ್ರಂಥಿಗಳು (Lymph Nodes) ವಿಷಕಾರಿ ಸೂಕ್ಷ್ಮಜೀವಿಗಳನ್ನು (Toxins) ಸಂಗ್ರಹಿಸುವ ಸಾಧ್ಯತೆ ಇರುತ್ತದೆ. ಈ ಭಾಗವನ್ನು ಆಗಾಗ್ಗೆ ಸೇವಿಸುವುದರಿಂದ ಸಾಂಕ್ರಾಮಿಕ ಅಥವಾ ವಿಷಕಾರಿ ಅಂಶಗಳ ಅಪಾಯ ಹೆಚ್ಚಾಗಬಹುದು.

 

ಕುತ್ತಿಗೆಯನ್ನು ತೆಗೆದು ಚಿಕನ್ ಖರೀದಿಸುವುದು ಉತ್ತಮ ಅಭ್ಯಾಸ. ಇದೇ ರೀತಿ, ಕೋಳಿ ಶ್ವಾಸಕೋಶ, ತಲೆ ಮತ್ತು ಕರುಳುಗಳಂತಹ ಆಂತರಿಕ ಭಾಗಗಳಲ್ಲಿ ಬ್ಯಾಕ್ಟೀರಿಯಾ, ಜೀವಾಣುಗಳು ಮತ್ತು ಕೀಟಾಣುಗಳು ಸುಲಭವಾಗಿ ಸಂಗ್ರಹಗೊಳ್ಳುತ್ತವೆ. ಇವುಗಳನ್ನು ಸೇವಿಸುವುದರಿಂದ ದೇಹದಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕಾರಣವಾಗಬಹುದು.

 

ಕೋಳಿ ಕಾಲುಗಳು ಹಾರ್ಮೋನುಗಳನ್ನು ಹೊಂದಿರುವ ಬಗ್ಗೆ ನಂಬಿಕೆ ಇದ್ದರೂ, ಅವು ಮುಖ್ಯವಾಗಿ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ. ಆದರೆ, ನೀವು ವಿಶೇಷವಾಗಿ ತಪ್ಪಿಸಬೇಕಾದ ಮತ್ತೊಂದು ಭಾಗವೆಂದರೆ ಕೋಳಿ ಚರ್ಮ (Chicken Skin). ಕೋಳಿ ಚರ್ಮವು ಹೆಚ್ಚಿನ ಪ್ರಮಾಣದ ಕೊಬ್ಬುಗಳನ್ನು ಹೊಂದಿರುತ್ತದೆ.

 

ಅರ್ಜೆಂಟೀನಾದ ಮೀಟ್ ನ್ಯೂಟ್ರಿಷನ್ ಇನ್ಫಾರ್ಮೇಶನ್ ಸೆಂಟರ್‌ನ ಮಾರಿಯಾ ಡೊಲೊರೆಸ್ ಪಾಜೋಸ್ ಹೇಳುವಂತೆ, ಚಿಕನ್ ಚರ್ಮವು ಶೇಕಡಾ 32 ರಷ್ಟು ಕೊಬ್ಬನ್ನು ಹೊಂದಿರುತ್ತದೆ. ಚರ್ಮವನ್ನು ತೆಗೆಯದೆ ತಿನ್ನುವುದರಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗಿ ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ, ಚರ್ಮವನ್ನು ತೆಗೆದು ಚಿಕನ್ ಅನ್ನು ಬೇಯಿಸುವುದು ಯಾವಾಗಲೂ ಆರೋಗ್ಯಕರ ಆಯ್ಕೆಯಾಗಿದೆ.