23 October 2025 | Join group

ದೀಪಾವಳಿ ಪ್ರಯುಕ್ತ NHAI ವಿಶೇಷ ಕೊಡುಗೆ: ಫಾಸ್ಟ್ಯಾಗ್ ಪಾಸ್ ಉಡುಗೊರೆಗೆ ಅವಕಾಶ

  • 19 Oct 2025 01:09:29 PM

ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ(ಎನ್.ಹೆಚ್.ಎ.ಐ.) ವಿಶೇಷ ಕೊಡುಗೆ ಘೋಷಿಸಿದೆ. 3000 ರೂ. ಫಾಸ್ಟ್ಯಾಗ್ ವಾರ್ಷಿಕ ಪಾಸ್ ಅನ್ನು ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಉಡುಗೊರೆಯಾಗಿ ನೀಡುವ ಅವಕಾಶ ಕಲ್ಪಿಸಿದೆ.

 

‘ರಾಜಮಾರ್ಗ ಯಾತ್ರೆ’ ಆ್ಯಪ್ ಮೂಲಕ ವಾರ್ಷಿಕ ಪಾಸ್ ಅನ್ನು ಉಡುಗೊರೆಯಾಗಿ ನೀಡಬಹುದಾಗಿದೆ. ‘ರಾಜಮಾರ್ಗ ಯಾತ್ರೆ’ ಆ್ಯಪ್ ನಲ್ಲಿರುವ ಆಡ್ ಪಾಸ್ ಕ್ಲಿಕ್ ಮಾಡುವ ಮೂಲಕ ಬಳಕೆದಾರರು ಫಾಸ್ಟ್ಯಾಗ್ ವಾರ್ಷಿಕ ಪಾಸ್ ಅನ್ನು ಉಡುಗೊರೆಯಾಗಿ ನೀಡಲು ಬಯಸುವ ವ್ಯಕ್ತಿಯ ವಾಹನದ ಸಂಖ್ಯೆ ಮತ್ತು ಸಂಪರ್ಕ ಮಾಹಿತಿ ಸೇರಿಸಬೇಕು. ಒಟಿಪಿ ದೃಢೀಕರಣದ ನಂತರ ಸಂಬಂಧಿಸಿದ ವಾಹನದ ಫಾಸ್ಟ್ಯಾಗ್ ಅನ್ವಯವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ತಿಳಿಸಿದೆ.