10 December 2025 | Join group

ಇನ್ಮುಂದೆ ರೈಲ್ವೆ ಟಿಕೆಟ್ ಖರೀದಿಸಲು ಕ್ಯೂ ನಿಲ್ಲಬೇಕಿಲ್ಲ - ನೀವಿದ್ದಲ್ಲೇ ಸಿಗತ್ತೆ ಟೆಕೆಟ್!

  • 04 Nov 2025 02:21:58 PM

ರೈಲ್ವೆ ನಿಲ್ದಾಣದಲ್ಲಿಯೇ ಟಿಕೆಟ್ ಖರೀದಿಸುತ್ತೇವೆ ಎಂದರೆ ಮುಗಿದೇ ಹೋಯಿತು. ಟಿಕೆಟ್ ಖರೀದಿಗೆ ಸರದಿ ನಿಲ್ಲಬೇಕು. ಅಷ್ಟೇ ಅಲ್ಲದೆ, ಚಿಲ್ಲರೆ ಸಹಿತ ಅನೇಕ ಸಮಸ್ಯೆ ಎದುರಿಸಬೇಕು. ಆದರೆ ಇದೀಗ ನೈಋತ್ಯ ರೈಲ್ವೆ  ಬೆಂಗಳೂರಿನ  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ  ನಿಲ್ದಾಣದಲ್ಲಿ Mobile unreserved ticketing system (MUTS) ಸಹಾಯಕ್ ಪರಿಚಯ ಮಾಡಿದೆ.

 

ದೇಶದಲ್ಲಿ ಐದು ರೈಲ್ವೆ ಸ್ಟೇಷನ್​ ಗಳಲ್ಲಿ ಈ ವ್ಯವಸ್ಥೆ ಜಾರಿ ಮಾಡಲು ರೈಲ್ವೆ ಇಲಾಖೆ ಸಿದ್ದತೆ ಮಾಡಿಕೊಂಡಿದ್ದು, ಪ್ರಾಯೋಗಿಕವಾಗಿ ಮೊದಲಿಗೆ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಪರಿಚಯ ಮಾಡಲಾಗಿದೆ. ವೀಕೆಂಡ್ ಅಥವಾ ಹಬ್ಬಗಳ ಸಂದರ್ಭದಲ್ಲಿ ಕೆಎಸ್ಎಆರ್ ರೈಲ್ವೆ ನಿಲ್ದಾಣಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಾರೆ. ಜನರ ದಟ್ಟಣೆ‌ ನಿಯಂತ್ರಣಕ್ಕಾಗಿ ಈ MUTS ಸಹಾಯಕ್ ಆರಂಭಿಸಲಾಗಿದ್ದು, ಇದರಿಂದ ಪ್ರಯಾಣಿಕರು ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲುವ ಅನಿವಾರ್ಯತೆ ತಪ್ಪಲಿದೆ.

 

MUTS ಸಹಾಯಕ್​ ಮೂಲಕ ಟಿಕೆಟ್ ಖರೀದಿ ಮಾಡಿದರೆ ಶೇ 3 ರಷ್ಟು ರಿಯಾಯಿತಿ ಕೂಡ ದೊರೆಯಲಿದೆ.