10 December 2025 | Join group

ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿಲ್ಲವೇ? ಈ ವಿವರ ಓದಿ ತಕ್ಷಣ ಲಿಂಕ್ ಮಾಡಿ

  • 06 Nov 2025 11:20:34 AM

ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆ ಹೇಳುತ್ತಲೇ ಬಂದಿದೆ. ಇದೀಗ ಡಿಸೆಂಬರ್ 31ಕ್ಕೆ ಡೆಡ್​ಲೈನ್ ಕೊಟ್ಟಿದೆ. 2025ರ ಡಿಸೆಂಬರ್ 31ರೊಳಗೆ ಆಧಾರ್​ಗೆ ಲಿಂಕ್ ಆಗದಿರುವ ಪ್ಯಾನ್ ನಂಬರ್​ಗಳು ನಿಷ್ಕ್ರಿಯಗೊಳ್ಳಲಿವೆ ಎಂದು ಸಿಬಿಡಿಟಿ ಹೇಳಿದೆ. ನಿಷ್ಕ್ರಿಯಗೊಂಡ ಪ್ಯಾನ್ ಇದ್ದೂ ಇಲ್ಲದಂತಾಗುತ್ತದೆ.

 

ಪ್ಯಾನ್ ಅಥವಾ ಪರ್ಮನೆಂಟ್ ಅಕೌಂಟ್ ನಂಬರ್ ಎಂಬುದು ಪ್ರತೀ ವ್ಯಕ್ತಿಗೂ ಆದಾಯ ತೆರಿಗೆ ಇಲಾಖೆ ನೀಡುವ ಗುರುತಿನ ಸಂಖ್ಯೆಯಾಗಿದೆ. ತೆರಿಗೆ ಉದ್ದೇಶದಿಂದ ಇದನ್ನು ನೀಡಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು, ದೊಡ್ಡ ಮೊತ್ತದ ಕ್ಯಾಷ್ ಡೆಪಾಸಿಟ್​ವರೆಗೆ ಅನೇಕ ಹಣಕಾಸು ಕಾರ್ಯಗಳಿಗೆ ಪ್ಯಾನ್ ಕಡ್ಡಾಯವಾಗಿರುತ್ತದೆ. ಹೀಗಾಗಿ, ವ್ಯಕ್ತಿಯ ಬಹುತೇಕ ಹಣಕಾಸು ಚಟುವಟಿಕೆಗಳು ಪ್ಯಾನ್ ಮೂಲಕ ಡಿಜಿಟಲ್ ಆಗಿ ದಾಖಲಾಗುತ್ತವೆ.

 

ಆಧಾರ್​ಗೆ ಪ್ಯಾನ್ ಲಿಂಕ್ ಆಗದೇ ಇದ್ದರೆ ಏನಾಗುತ್ತೆ?

ಆಧಾರ್​​ಗೆ ಪ್ಯಾನ್ ಲಿಂಕ್ ಆಗದೇ ಹೋದರೆ ಅದು ಇನಾಪರೇಟಿವ್ ಆಗುತ್ತದೆ.

ಪ್ಯಾನ್ ಇನಾಪರೇಟಿವ್ ಆದರೆ ಪ್ಯಾನ್ ಇದ್ದೂ ಇಲ್ಲದಂತಾಗುತ್ತದೆ.

ಐಟಿ ರಿಟರ್ನ್ ಸಲ್ಲಿಸಲು ಆಗುವುದಿಲ್ಲ.

ಸಲ್ಲಿಸಲಾಗಿರುವ ಐಟಿಆರ್​ಗಳನ್ನು ಪ್ರೋಸಸಿಂಗ್ ಮಾಡಲಾಗುವುದಿಲ್ಲ.

ಐಟಿಆರ್​ಗಳು ಪ್ರೋಸಸಿಂಗ್ ಆಗಿದ್ದರೂ ಅವಗಳಿಂದ ರೀಫಂಡಿಂಗ್ ಸಿಗುವುದಿಲ್ಲ.

ಟಿಡಿಎಸ್ ಮುರಿದುಕೊಳ್ಳುವುದಿದ್ದರೆ ಶೇ. 10 ಬದಲು ಶೇ. 20ರಷ್ಟು ಟ್ಯಾಕ್ಸ್ ಅನ್ನು ಹಿಡಿದುಕೊಳ್ಳಲಾಗುತ್ತದೆ.

ಹೊಸ ಬ್ಯಾಂಕ್ ಅಕೌಂಟ್ ತೆರೆಯಲು ಆಗುವುದಿಲ್ಲ.

ದೊಡ್ಡ ಮೊತ್ತದ ಕ್ಯಾಷ್ ಡೆಪಾಸಿಟ್ ಸಾಧ್ಯವಾಗುವುದಿಲ್ಲ.

ಉದ್ಯೋಗಿಗಳಿಗೆ ಸಂಬಳ ಕ್ರೆಡಿಟ್ ಆಗಲ್ಲ.

ಎಸ್​ಐಪಿಗಳಿದ್ದರೆ ವರ್ಕ್ ಆಗಲ್ಲ.

 

ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡುವುದು ಹೇಗೆ: ಹಂತ ಹಂತದ ಪ್ರಕ್ರಿಯೆ

1. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ಗೆ ಭೇಟಿ ನೀಡಿ: (https://www.incometax.gov.in/iec/foportal/).

2. “ಲಿಂಕ್ ಆಧಾರ್” ಕ್ಲಿಕ್ ಮಾಡಿ (ಮುಖಪುಟದ ಕೆಳಗೆ ಎಡ).

3. ತೋರಿಸಿರುವ ಕ್ಷೇತ್ರಗಳಲ್ಲಿ ನಿಮ್ಮ 10 ಅಂಕಿಯ ಪ್ಯಾನ್ ಮತ್ತು 12 ಅಂಕಿಯ ಆಧಾರ್ ಸಂಖ್ಯೆಗಳನ್ನು ನಮೂದಿಸಿ.

4. ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ ಮತ್ತು ಅಗತ್ಯವಾದ 1,000 ರೂ.ಗಳ ಪಾವತಿಯನ್ನು ಪೂರ್ಣಗೊಳಿಸಿ.

5. ವಿನಂತಿಯನ್ನು ಸಲ್ಲಿಸಿ- ಪೋರ್ಟಲ್ ಅದನ್ನು ಸ್ವೀಕರಿಸುತ್ತದೆ ಮತ್ತು ಲಿಂಕ್ ಪ್ರಕ್ರಿಯೆಗೊಳಿಸುತ್ತದೆ.

 

ಆಧಾರ್-ಪ್ಯಾನ್ ಲಿಂಕ್: ಲಿಂಕ್ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?

1. ಅದೇ ಪೋರ್ಟಲ್ನಲ್ಲಿ “ಲಿಂಕ್ ಆಧಾರ್ ಸ್ಟೇಟಸ್” ಅನ್ನು ಆಯ್ಕೆ ಮಾಡಿ.

2. ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ನಮೂದಿಸಿ.

3. ಇವೆರಡೂ ಪರಸ್ಪರ ಸಂಬಂಧ ಹೊಂದಿವೆಯೇ ಎಂಬುದನ್ನು ನೋಡಿ.

 

ಆಧಾರ್​ಗೆ ಪ್ಯಾನ್ ಲಿಂಕ್ ಮಾಡುವುದು ಹೇಗೆ?

ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ವೆಬ್​ಸೈಟ್​ಗೆ ಭೇಟಿ ನೀಡಿ. ಇದರ ವಿಳಾಸ ಇಂತಿದೆ:

www.incometax.gov.in

 

ವೆಬ್​ಸೈಟ್​ನ ಮುಖ್ಯಪುಟದಲ್ಲಿ ಕ್ವಿಕ್ ಲಿಂಕ್ಸ್ ಸೆಕ್ಷನ್ ಅಡಿಯಲ್ಲಿ ‘ಲಿಂಕ್ ಆಧಾರ್’ ಅನ್ನು ಕ್ಲಿಕ್ ಮಾಡಿ. ನಿಮ್ಮ 10 ಸಂಖ್ಯೆಯ ಪ್ಯಾನ್ ನಂಬರ್ ಮತ್ತು 12 ಅಂಕಿಗಳ ಆಧಾರ್ ನಂಬರ್ ಅನ್ನು ಹಾಕಿ. ಆಧಾರ್​ನಲ್ಲಿರುವ ಹೆಸರನ್ನು ನಮೂದಿಸಿ.

 

‘ಐ ಅಗ್ರೀ ಟು ವ್ಯಾಲಿಡೇಟ್ ಮೈ ಆಧಾರ್ ಡೀಟೇಲ್ಸ್’ ಬಾಕ್ಸ್ ಅನ್ನು ಚೆಕ್ ಮಾಡಿ. ಆಧಾರ್​ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಮೂಲಕ ಒಟಿಪಿ ಪಡೆದು ಹಾಕಿರಿ. ವ್ಯಾಲಿಡೇಟ್ ಕ್ಲಿಕ್ ಮಾಡಿ.