31 January 2026 | Join group

ಮಂಗಳೂರಿಗೆ ‘ಮಂಗಳೂರು’ ಎಂಬ ಹೆಸರು ಹೇಗೆ ಬಂತು? ಇತಿಹಾಸ ಹೇಳುವುದು ಏನು?

  • 19 Nov 2025 07:36:07 PM

ಮಂಗಳೂರು: ಕುಡ್ಲ, ಮಂಗಳೂರು, ಕೊಡಿಯಾಲ್, ಮಂಗಲಾಪುರ, ಮೈಕಾಲ – ಈ ರೀತಿಯಾಗಿ ಅನೇಕ ಹೆಸರಿನಿಂದ ಪರಿಚಿತವಾಗಿರುವ ನಮ್ಮ ಮಂಗಳೂರು, ತನ್ನ ವಿಶೇಷ ಇತಿಹಾಸ ಹಾಗೂ ಸಂಸ್ಕೃತಿಗಾಗಿ ಹೆಸರುವಾಸಿಯಾಗಿದೆ. ಮಂಗಳೂರಿಗೆ ಈ ಹೆಸರು ಬರುವಂತೆ ಮಾಡಿದ ಪ್ರಮುಖ ಕಾರಣವೆಂದರೆ ಇಲ್ಲಿ ಇರುವ ಮಂಗಳಾದೇವಿ ದೇವಾಲಯ.

 

ಈ ದೇವಸ್ಥಾನಕ್ಕೆ ಆಸರೆಯಾದ ಪುರಾಣ ಮತ್ತು ಸ್ಥಳೀಯ ಆಚರಣೆಗಳು ತೋರಿಸುವಂತೆ, ಸ್ವತಃ ಶ್ರೀ ಪರಶುರಾಮರು ಮಂಗಳಾದೇವಿಯ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಿದರು ಎಂಬ ನಂಬಿಕೆ ಸ್ಥಳೀಯರಿಗೆ ಬಹಳ ಗಟ್ಟಿಯಾಗಿದೆ. ಇದೇ ಸಂದರ್ಭದಲ್ಲಿ, ನಾವು ಇಂದು ಕಾಣುವ ಮಂಗಳಾದೇವಿ ದೇವಸ್ಥಾನದ ಗರ್ಭಗುಡಿ ಮತ್ತು ಮುಖ್ಯ ಆವರಣವನ್ನು ಆಳುಪ ವಂಶದ ರಾಜರಾದ ಕುಂದವರ್ಮ ಅವರು 9ನೇ ಶತಮಾನದಲ್ಲಿ ನಿರ್ಮಿಸಿದ್ದಾರೆ ಎನ್ನುವುದು ಇತಿಹಾಸಕಾರರ ಅಭಿಮತ.

 

ಆದರೆ, ಮತ್ತೊಂದು ವಾದವೂ ಇದೆ – ಮಂಗಳೂರಿನ ‘ಮಂಗಳೂರು’ ಎಂಬ ಹೆಸರು ಮಂಗಳಾದೇವಿ ದೇವಾಲಯದ ನಿರ್ಮಾಣಕ್ಕಿಂತಲೂ ಮೊದಲೇ ಬಳಕೆಯಲ್ಲಿತ್ತು ಎಂದು ಕೆಲವು ಪುರಾತತ್ವ ಹಾಗೂ ಐತಿಹಾಸಿಕ ಉಲ್ಲೇಖಗಳು ತಿಳಿಸುತ್ತವೆ. ಅಂದರೆ, ಈ ಕರಾವಳಿಯ ಭಾಗಕ್ಕೆ ಮಂಗಳ ಎಂಬ ಪದದ ಪ್ರಾಚೀನ ಸಂಪರ್ಕ ಇದ್ದಿರಬಹುದು ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಇವೆಲ್ಲವೂ ಸೇರಿ ಮಂಗಳೂರು ಇಂದು ಕೇವಲ ಒಂದು ನಗರವಲ್ಲ; ಅದು ಪುರಾತನ ಪರಂಪರೆ, ನಂಬಿಕೆ, ಸಂಸ್ಕೃತಿ ಮತ್ತು ಇತಿಹಾಸಗಳ ಸಮಗ್ರ ಪ್ರತಿಬಿಂಬ.