23 December 2025 | Join group

ಪ್ರತಿದಿನ ಕಹಿಬೇವು ಮತ್ತು ಅರಿಶಿನ ಸೇವನೆ ಮಾಡುವುದರಿಂದ ದೇಹಕ್ಕೆ ಏನು ಪ್ರಯೋಜನ?

  • 20 Dec 2025 07:14:36 PM

ಭಾರತೀಯ ಪರಂಪರೆಯಲ್ಲಿ ಕಹಿಬೇವು (ನೀಮ್) ಮತ್ತು ಅರಿಶಿನಕ್ಕೆ ವಿಶಿಷ್ಟ ಸ್ಥಾನವಿದೆ. ಸಾವಿರಾರು ವರ್ಷಗಳಿಂದ ಆಯುರ್ವೇದದಲ್ಲಿ ಈ ಎರಡನ್ನೂ ಆರೋಗ್ಯ ಕಾಪಾಡಿಕೊಳ್ಳುವ ಸಹಜ ಔಷಧಿಗಳಾಗಿ ಬಳಸಲಾಗುತ್ತಿದೆ. ಇಂದಿನ ವೈಜ್ಞಾನಿಕ ಅಧ್ಯಯನಗಳೂ ಸಹ ಇದರ ಮಹತ್ವವನ್ನು ಒಪ್ಪಿಕೊಂಡಿವೆ.

 

ಕಹಿಬೇವು ದೇಹಕ್ಕೆ ಮಾಡುವ ಕೆಲಸವೇನು?
ಕಹಿಬೇವು ದೇಹದೊಳಗೆ ಹೋಗುತ್ತಿದ್ದಂತೆ ಮೊದಲಾಗಿ ಪರಿಣಾಮ ಬೀರುವುದೇ ಜೀರ್ಣನಾಳದ ಮೇಲೆ. ನಮ್ಮ ಜೀರ್ಣನಾಳದಲ್ಲಿ ಲಕ್ಷಾಂತರ ಸೂಕ್ಷ್ಮ ಜೀವಿಗಳು (Gut Microbiome) ಇರುತ್ತವೆ. ಇವುಗಳಲ್ಲಿ ಅನೇಕ ಜೀವಿಗಳು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ ಮತ್ತು ದೇಹದ ಹಲವು ಕಾರ್ಯಗಳಿಗೆ ಸಹಕಾರಿಯಾಗಿದೆ. ಆದರೆ ಕೆಲವು ಸೂಕ್ಷ್ಮ ಜೀವಿಗಳು ದೇಹಕ್ಕೆ ಹಾನಿ ಮಾಡುವವುಗಳಾಗಿರುತ್ತವೆ.

ಕಹಿಬೇವಿನಲ್ಲಿರುವ ನೈಸರ್ಗಿಕ ತತ್ತ್ವಗಳು ಇರುತ್ತದೆ. ಜೀರ್ಣನಾಳವನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತವೆ ಮತ್ತು ಅನಗತ್ಯ ಹಾಗೂ ಹಾನಿಕಾರಕ ಪರಾವಲಂಬಿ ಜೀವಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತವೆ. ಚರ್ಮದ ಸಮಸ್ಯೆಗಳು, ರಕ್ತದ ಅಶುದ್ಧತೆ ಕಡಿಮೆಯಾಗಲು ಕೂಡ  ನೆರವಾಗುತ್ತವೆ.

 

ಅರಿಶಿನದ ಪಾತ್ರ ಏನು?
ಅರಿಶಿನದಲ್ಲಿ ಇರುವ ಕರ್ಕ್ಯೂಮಿನ್ ಎಂಬ ಅಂಶವಿದೆ. ಇದು ಉರಿಯೂತ (inflammation) ಕಡಿಮೆ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಳಾಂಗಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. 

 

ಕಹಿಬೇವು ಮತ್ತು ಅರಿಶಿನ ಒಟ್ಟಿನ ಪ್ರಯೋಜನ
ಕಹಿಬೇವು ಮತ್ತು ಅರಿಶಿನವನ್ನು ಒಟ್ಟಿಗೆ ಸೇವಿಸಿದಾಗ, ದೇಹಕ್ಕೆ ಅವಶ್ಯಕವಿಲ್ಲದ ಹಾನಿಕಾರಕ ಸೂಕ್ಷ್ಮ ಜೀವಿಗಳ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಜೀರ್ಣನಾಳದ ಸಮತೋಲನ ಸುಧಾರಣೆ ಮತ್ತು ದೇಹದ ಸ್ವಾಭಾವಿಕ ಶುದ್ಧೀಕರಣ ಪ್ರಕ್ರಿಯೆಗೆ ಬೆಂಬಲ ನೀಡುತ್ತದೆ. 

ಇದು ದೇಹದೊಳಗಿನ ಎಲ್ಲ ಸೂಕ್ಷ್ಮ ಜೀವಿಗಳನ್ನು ನಾಶಮಾಡುವುದಿಲ್ಲ. ಆದರೆ ದೇಹಕ್ಕೆ ಹಾನಿ ಮಾಡುವ ಜೀವಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದು ಆಯುರ್ವೇದದ ನಂಬಿಕೆ.

ಗರ್ಭಿಣಿಯರು, ದೀರ್ಘಕಾಲೀನ ಕಾಯಿಲೆ ಇರುವವರು ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ. ಅತಿಯಾಗಿ ಸೇವಿಸುವುದು ಸೂಕ್ತವಲ್ಲ. ಇದು ಔಷಧಕ್ಕೆ ಪರ್ಯಾಯವಲ್ಲ, ಆರೋಗ್ಯಕರ ಜೀವನಶೈಲಿಗೆ ಪೂರಕ ಮಾತ್ರವಾಗಿರುತ್ತದೆ. 

ಪ್ರತಿದಿನ ಕಹಿಬೇವು ಮತ್ತು ಅರಿಶಿನವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ದೇಹದ ಒಳಸಂರಚನೆಗೆ ಸಹಾಯಕವಾಗಬಹುದು. ಆದರೆ ಆರೋಗ್ಯ ಸಮಸ್ಯೆಗಳಿದ್ದಲ್ಲಿ ವೈದ್ಯರ ಸಲಹೆ ಅತ್ಯವಶ್ಯ.