20 June 2025 | Join group

ರಾಜ್ಯದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆಸ್ತಿ ಮಾಲಕರಿಗೆ ಬಂದಿದೆ ಗುಡ್ ನ್ಯೂಸ್

  • 14 May 2025 10:34:09 AM

ಬೆಂಗಳೂರು, ಮೇ 14: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಕರ್ನಾಟಕ ಭೂಕಂದಾಯ ಅಧಿನಿಯಮ, 1964 ರ ಪ್ರಕರಣ 94-ಸಿ, 94-ಸಿಸಿ ಹಾಗೂ 94-ಡಿ ರಡಿಯಲ್ಲಿ ನಿವೇಶನ ಮತ್ತು ಮನೆ ನೀಡುವ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9 ಮತ್ತು 11-ಎ ನೀಡುವ ಬಗ್ಗೆ ಸರಕಾರದ ಸಚಿವಾಲಯದ ಆದೇಶದಂತೆ ಸುತ್ತೋಲೆಯನ್ನು ಮೇ 14 ರಂದು ಹೊರಡಿಸಿದೆ.

 

ಕಂದಾಯ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಮೇ 02, 2025 ರಂದು ನಡೆದ ಸಭಾ ನಡವಳಿಯ ನಂತರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಕರ್ನಾಟಕ ಭೂಕಂದಾಯ ಅಧಿನಿಯಮ ಸುತ್ತೋಲೆ ಹೊರಡಿಸಿ ಗುಡ್ ನ್ಯೂಸ್ ಕೊಟ್ಟಿದೆ.

 

ಕರ್ನಾಟಕ ಸರಕಾರದ ವತಿಯಿಂದ ಹೊರಡಿಸಿದ ಈ ಸುತ್ತೋಲೆಯನ್ನು ಈ ಕೆಳಗೆ ಲಗತ್ತಿಸಲಾಗಿದೆ.