Senior Citizen Saving Scheme: ಭಾರತ ಸರಕಾರವು ಹಿರಿಯ ನಾಗರಿಕರಿಗೆ ಉಳಿತಾಯ ಯೋಜನೆಯೊಂದನ್ನು ಜಾರಿಗೊಳಿಸಿದೆ. ಈ ಯೋಜನೆ ಮೂಲಕ ಹಿರಿಯ ನಾಗರಿಕರಿಗೆ ಅತ್ಯಧಿಕ ಬಡ್ಡಿಯನ್ನು ನೀಡಲಾಗುತ್ತದೆ. ಈ ಯೋಜನೆ ನಿವೃತ್ತಿ ದಿನಗಳನ್ನು ಸುರಕ್ಷಿತವಾಗಿ ಯೋಜಿಸುವ ಸಲುವಾಗಿ ಜಾರಿಗೊಳಿಸಲಾಗಿದೆ. ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (SCSS), ಹಿರಿಯ ನಾಗರಿಕರ ಉಳಿತಾಯ ಯೋಜನೆ ಸರ್ಕಾರಿ ಬೆಂಬಲಿತ ಉಳಿತಾಯ ಯೋಜನೆಯಾಗಿದ್ದು, 50 ವರ್ಷದ ವಯಸ್ಸಿನ ನಿವೃತ್ತ ರಕ್ಷಣಾ ಸಿಬ್ಬಂದಿಗಳಿಂದ ಹಿಡಿದು 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸಾಮಾನ್ಯ ನಾಗರಿಕರಿಗೆ ಈ ಯೋಜನೆಯ ಉಪಯೋಗವನ್ನು ಪಡೆಯಬಹುದಾಗಿದೆ.
ಹಿರಿಯರಿಗೆ ಆಶಾಯದಾಯಕವಾದ ಈ ಯೋಜನೆಯಲ್ಲಿ ಏಪ್ರಿಲ್ 2025 ಕ್ಕೆ ತಿಳಿಸಿದಂತೆ, 8.20% ಆಕರ್ಷಕ ಬಡ್ಡಿದರದೊಂದಿಗೆ ಅತ್ಯಂತ ಲಾಭದಾಯಕ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯನ್ನು ತೆರೆಯುವ ಪ್ರಕ್ರಿಯೆಯು ಕೂಡಾ ತುಂಬಾ ಸುಲಭದಾಯಕವಾಗಿದ್ದು, ಭಾರತೀಯ ಹಿರಿಯ ನಾಗರಿಕರಿಗೆ ಬಹಳ ಪ್ರಯೋಜನಕಾರಿಯಾಗಿದೆ.
ಹಿರಿಯ ನಾಗರೀಕ ಉಳಿತಾಯ ಯೋಜನೆ (SCSS) ಯನ್ನು ತೆರೆಯಲು ಬೇಕಾದ ಅರ್ಹತೆ:
60 ಅಥವಾ ಅದಕ್ಕಿಂದ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಮಾತ್ರ
50 ವರ್ಷ ಅದಕ್ಕಿಂತ ಹೆಚ್ಚಿನ ನಿವೃತ್ತ ಸೇನಾ ಸಿಬ್ಬಂದಿಗಳು
55 ರಿಂದ 60 ವರ್ಷದೊಳಗಿನ ನಿವೃತ್ತ ನಾಗರೀಕ ನೌಕರರು (ಸ್ವಯಂಪ್ರೇರಿತ ಅಥವಾ ಕೆಲಸ ಕಳೆದುಕೊಂಡವರು)
ಈ ಖಾತೆಯನ್ನು ಕನಿಷ್ಠ ಒಂದು ಸಾವಿರ ರೂಪಾಯಿ ಠೇವಣಿಯಿಂದ ಗರಿಷ್ಠ 30 ಲಕ್ಷ ವರೆಗಿನ ಯಾವುದೇ ಮೊತ್ತದೊಂದಿಗೆ ತೆರೆಯಬಹುದಾಗಿದೆ.
ಬೇಕಾಗಿರುವ ದಾಖಲೆಗಳು
ಗುರುತಿನ ಪುರಾವೆ (ಆಧಾರ್ ಅಥವಾ ಪ್ಯಾನ್ ಕಾರ್ಡ್)
ವಿಳಾಸ ಪುರಾವೆ (ಯುಟಿಲಿಟಿ ಬಿಲ್, ಆಧಾರ್)
ವಯಸ್ಸಿನ ಪುರಾವೆ (ಜನನ ಪ್ರಮಾಣಪತ್ರ, ಪಾಸ್ಪೋರ್ಟ್, ಮತದಾರರ ಗುರುತಿನ ಚೀಟಿ)
ಮುಂಚಿತವಾಗಿ ನಿವೃತ್ತಿಯಾದವರಿಗೆ - ನಿವೃತ್ತಿ ಪ್ರಮಾಣಪತ್ರ
ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರಗಳು
ಸರಿಯಾಗಿ ಭರ್ತಿ ಮಾಡಿದ SCSS ಖಾತೆ ತೆರೆಯುವ ಅರ್ಜಿ
SCSS ಖಾತೆ ತೆರೆಯುವ ವಿಧಾನ
ಅಭ್ಯರ್ಥಿಗಳು ಭಾರತೀಯರಾಗಿರಬೇಕು. NRI ಗಳಿಗೆ ಅವಕಾಶವಿಲ್ಲ
ಒಂದು ವೇಳೆ ಜಂಟಿ ಖಾತೆ ತೆರೆಯಬೇಕಾರೆ ಸಂಗತಿಯೊಂದಿಗೆ ಮಾತ್ರ
ಆನ್ಲೈನ್ ಮೂಲಕ ಅಪ್ಲಿಕೇಶನ್ ಭರ್ತಿ ಅಥವಾ ಅಂಚೆ ಕಚೇರಿಗಳು ಇಲ್ಲವೇ ಗೊತ್ತುಪಡಿಸಿದ ಬ್ಯಾಂಕ್ ಶಾಖೆಗಳ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಖಾತೆ ತೆರೆಯುವ ಹಂತಗಳು ಈ ಕೆಳಗಿನಂತಿದೆ
ಅಂಚೆ ಕಚೇರಿ ಅಥವಾ ಅಧಿಕೃತ ಬ್ಯಾಂಕ್ಗೆ ಭೇಟಿ ನೀಡಿ
SCSS ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ
KYC ದಾಖಲೆಗಳನ್ನು ಸಲ್ಲಿಸಿ
ಛಾಯಾಚಿತ್ರ ಸಲ್ಲಿಸಿ
ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಹೂಡಿಕೆ ಮೊತ್ತವನ್ನು ಠೇವಣಿ ಮಾಡಿ
ಖಾತೆ ಪಾಸ್ ಬುಕ್ ಪಡೆಯಿರಿ (ಬ್ಯಾಂಕ್ ಯಶಸ್ವಿ ಪರಿಶೀಲನೆಯ ನಂತರ ನೀಡುತ್ತಾರೆ)
ಈ ಯೋಜನೆಯನ್ನು 3 ವರ್ಷಗಳವರೆಗೆ ವಿಸ್ತರಿಸುವ ಆಯ್ಕೆ ಇರುತ್ತದೆ. ಅಕಾಲಿಕ ಹಿಂಪಡೆಯುವಿಕೆಯನ್ನು ಕೂಡ ಅನುಮತಿಸಲಾಗಿದೆ. ಭಾರತ ಸರಕಾರ ಬೆಂಬಲಿತ ಈ ಯೋಜನೆಯ ಸದುಪಯೋಗ ಪಡೆಯುವುದು ಬಹಳ ಉತ್ತಮ.