ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನಾನಾ ರೀತಿಯಲ್ಲಿ ಜನರಿಗೆ ಮೋಸ ಮಾಡುವ ವಿಧಾನವನ್ನು ವಂಚಕರು ಪ್ರಯೋಗಿಸುತ್ತಲೇ ಇರುತ್ತಾರೆ. ನಾವು ಎಷ್ಟು ಬುದ್ಧಿವಂತರಾದರು ಸ್ವಲ ಎಡವಿದರೆ ಈ ರೀತಿಯ ವಂಚನೆಯ ಜಾಲಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿರುತ್ತದೆ.
ವಾಟ್ಸಪ್ಪ್ ಮೂಲಕ ಯಾವುದೋ ಲಿಂಕ್ ಕಳುಹಿಸಿ ಅದನ್ನು ಕ್ಲಿಕ್ ಮಾಡಿದಾಗ ನಮ್ಮ ಮೊಬೈಲ್ ನಲ್ಲಿರುವ ಬ್ಯಾಂಕ್ ಸಂಬಂಧಿತ ಡಾಟಾಗಳನ್ನೂ ಕದ್ದಿರುವ ಪ್ರಕರಣ ಬಹಳಷ್ಟು ಬೆಳಕಿಗೆ ಬಂದಿತ್ತು. ಆದರೆ ಇದೀಗ ಈ ವಂಚಕರು ಹೊಸ ರೀತಿಯ ಮಾರ್ಗವೊಂದನ್ನು ಬಳಸಿಕೊಂಡಿದ್ದಾರೆ.
ಸೈಬರ್ ಅಪರಾಧಿಗಳು ವಾಟ್ಸಪ್ ನಲ್ಲಿ ಫೋಟೋ ಕಳಿಸುವ ಮೂಲಕ 'ಸ್ಟೆಗಾನೋಗ್ರಫಿ' ಎಂಬ ಹೊಸ ವಂಚನೆಗೆ
ಮುಂದಾಗಿದ್ದಾರೆ. ಇವರು ವಾಟ್ಸಪ್ಪ್ ನಲ್ಲಿ ಫೋಟೋವೊಂದನ್ನು ಕಳುಹಿಸುತ್ತಾರೆ. ವಾಟ್ಸಪ್ಪ್ ನಲ್ಲಿ ಅವರು ಕಳುಹಿಸುವ ಫೋಟೋ ಡೌನ್ಲೋಡ್ ಮಾಡಿದ ತಕ್ಷಣ ಬ್ಯಾಂಕ್ ಖಾತೆಗಳಲ್ಲಿ ಹಣ ಮಾಯವಾಗುತ್ತದೆ.
ಬೈನರಿ ಕೋಡ್ ಹೊಂದಿರುವ ಫೋಟೋ ಮೂಲಕ 'ಮಾಲ್ವೇರ್ ಡಿವೈಸ್' ಗೆ ಪ್ರವೇಶಿಸುತ್ತದೆ. ನಂತರ, ನಮ್ಮ ಸಂಖ್ಯೆಗಳಿಗೆ ಬರುವ ಓಟಿಪಿ(OTP) ಗಳು ಸಹ ವಂಚಕರ ಕೈಗೆ ಸೇರುತ್ತವೆ. ಅಪರಿಚಿತ ಸಂಖ್ಯೆಗಳಿಂದ ಬರುವ ಫೋಟೋಗಳನ್ನು ಡೌನ್ಲೋಡ್ ಮಾಡಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಈ ಮೂಲಕ ಜರನು ಎಚ್ಚರಿಕೆಯಿಂದ ಇರಬೇಕು ಎಂದು ತಂತ್ರಜ್ಞಾನಿಗಳು ಒತ್ತಿ ಹೇಳುತ್ತಾರೆ.