20 June 2025 | Join group

ನಿಮಗೂ ನಮ್ಮ ವಿಧಾನಸೌಧ ಭೇಟಿ ಮಾಡಬೇಕೆ? ಹಾಗಾದರೆ ಸರಕಾರ ನಿಮಗೆ ಈ ಅವಕಾಶ ನೀಡಿದೆ

  • 29 May 2025 12:07:45 AM

ನೀವು ಏನಾದರೂ ಕರ್ನಾಟಕದ ರಾಜಧಾನಿ ಬೆಂಗಳೂರಿನ ವಿಧಾನಸೌಧ ನೋಡಲು ಇಚ್ಛಿಸುತ್ತೀರಾ? ಹಾಗಾದರೆ ಕರ್ನಾಟಕ ರಾಜ್ಯ ಸರಕಾರ ನಿಮಗೆ ಈ ಅವಕಾಶವನ್ನು ನೀಡುತ್ತಿದೆ. ದೇಶದ ಪ್ರಥಮ ವಿಧಾನಸೌಧ ನೋಡಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ವಿಧಾನಸೌಧ ಸಚಿವಾಲಯ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಸಿಬ್ಬಂದಿ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಅವಕಾಶವನ್ನು ಕಲ್ಪಿಸುತ್ತಿದೆ.

 

ಇದೆ ಬರುವ ಜೂನ್ 1, 2025 ರಿಂದ ವಿಧಾನಸೌಧದ 'ವಾಕಿಂಗ್ ಗೈಡೆಡ್ ಟೂರ್' ಗೆ ಚಾಲನೆ ನೀಡಲಾಗುವುದು. ಪ್ರತಿ ಭಾನುವಾರ ಮತ್ತು ತಿಂಗಳಿನ ಎರಡನೇ ಮತ್ತು ನಾಲ್ಕನೇ ಶನಿವಾರ ನೀವು ವಿಧಾನಸೌಧ ವೀಕ್ಷಿಸಿ ನಿಮ್ಮ ಕಣ್ಣುಗಳನ್ನು ತುಂಬಿಸಿಕೊಳ್ಳಬಹುದು. ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ಪ್ರವೇಶವನ್ನು ಆಯೋಜಿಸಲಾಗುತ್ತದೆ.

 

ಶುಲ್ಕ, ವೇಳಾಪಟ್ಟಿ ಮತ್ತು ಇನ್ನಿತರ ವಿವರ

ಶುಲ್ಕ : 16 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ 50 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. 15 ಮತ್ತು ಅದಕ್ಕಿಂತ ಸಣ್ಣ ವಯೋಮಾನರಿಗೆ ಉಚಿತ ಪ್ರವೇಶವಿರುತ್ತದೆ.

ಭೇಟಿ ದಿನಗಳು: ತಿಂಗಳಿನ ಪ್ರತಿ ಭಾನುವಾರ ಮತ್ತು ಎರಡನೇ ಹಾಗೂ ನಾಲ್ಕನೇ ಶನಿವಾರ ಪ್ರವೇಶ ಕಲ್ಪಿಸಲಾಗುತ್ತದೆ.

ಭೇಟಿಯ ಸಮಯ : ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ.

ಬುಕಿಂಗ್ : https://kstdc.co/activities/group ಲಿಂಕ್ ಬಳಸಿ ಬುಕಿಂಗ್ ಮಾಡಬಹುದಾಗಿದೆ.

ನಿಯಮಗಳು: KSTDC ವೆಬ್ ಸೈಟ್ ನಲ್ಲಿ ನಮೂದಿಸಲಾಗಿದೆ

ಟೂರ್ ಸಮಯ : 90 ನಿಮಿಷಗಳು ಮಾತ್ರ. ಒಂದು ಬ್ಯಾಚ್ ನಲ್ಲಿ 30 ಜನರಿಗೆ ಅವಕಾಶ ಮತ್ತು ದಿನದಲ್ಲಿ ಒಟ್ಟು 300 ಜನರಿಗೆ ಮಾತ್ರ ಅವಕಾಶ.

 

ವಿಧಾನ ಸೌಧದ ಒಳಗಡೆ ನೋಡಲು ಇರುವ ಸ್ಥಳಗಳು

ವಿಧಾನಸೌಧದ ಫೌಂಡೇಶನ್ ಸ್ಟೋನ್ - ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ಹಾಕಿದ

ವಿಧಾನಸೌಧದ ಗಂಧದ ಪ್ರಾತ್ಯಕ್ಷಿಕೆ

ಬ್ಯಾಂಕ್ವೆಟ್ ಹಾಲ್

ವಿಧಾನಸಭಾ ಅಧಿವೇಶನ ಸಭಾಂಗಣ

ವಿಧಾನ ಪರಿಷತ್

ವಿಧಾನಸೌಧದ ಸುಂದರವಾದ ಬಹು ಮೆಟ್ಟಿಲುಗಳು

ವಿಧಾನಸೌಧದ ಕಟ್ಟಡ ವಿನ್ಯಾಸ, ಪರಂಪರಿಕತೆ ಮತ್ತು ಇತಿಹಾಸ

ಹಲವಾರು ದಿಗ್ಗಜರ ಪ್ರತಿಮೆಗಳು

 

ವಿಧಾನ ಸೌಧಕ್ಕೆ ಭೇಟಿ ಕೊಡುವ ಮೊದಲು ಅದರ ಸರಕಾರಿ ವೆಬ್ ಸೈಟ್ ಆದ https://kstdc.co/activities/group ಗೆ ಲಾಗಿನ್ ಆಗಿ ವಿಧಾನ ಸೌಧದ ಒಳಗಡೆ ಪಾಲಿಸಬೇಕಾದ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ನಿಮ್ಮ ಪ್ರವಾಸವನ್ನು ಯೋಜಿಸಬೇಕಾಗಿ ವಿನಂತಿ.