20 June 2025 | Join group

ನೀವು SBI ಗ್ರಾಹಕರೇ? ನೆನಪಿಡಿ, ವಂಚನೆಯಿಂದ ತಪ್ಪಿಸಲು ಬ್ಯಾಂಕ್ ಈ ನಂಬರ್ ನಿಂದ ಮಾತ್ರ ನಿಮಗೆ ಕರೆ ಮಾಡುತ್ತದೆ

  • 07 Jun 2025 01:52:50 AM

ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವುದರಿಂದ ಬ್ಯಾಂಕ್ ಮತ್ತು ಇನ್ನಿತರ ಆನ್ಲೈನ್ ವಹಿವಾಟುಗಳು ಬಹಳ ತೊಂದರೆಯನ್ನು ಅನುಭವಿಸುತ್ತಿದೆ. ಈ ಕಾರಣಕ್ಕಾಗಿ SBI ಬ್ಯಾಂಕ್ ತನ್ನ ಖಾತೆದಾರರಿಗೆ ಎಚ್ಚರಿಗೆಕೆಯೊಂದನ್ನು ನೀಡಿದೆ.

 

SBI ಬ್ಯಾಂಕ್ ಗಳಿಗೆ ಸಂಬಂಧಪಟ್ಟ ಕರೆಗಳು +91-1600 ಸಂಖ್ಯೆಗಳಿಂದಲೇ ಮಾತ್ರ ಮಾಡಲಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ. ಬ್ಯಾಂಕ್ ವಹಿವಾಟು ಮತ್ತು ಸೇವೆಗಳಿಗೆ ಸಂಬಂಧಪಟ್ಟ ಕರೆಗಳು ನಿಮಗೆ ಈ ನಂಬರ್ ನಿಂದ ಮಾತ್ರ ಬರಲಿದೆ.

 

ನಮೂದಿಸಿದ ನಂಬರ್ ಮಾತ್ರ ನಿಜವಾದ ಮತ್ತು ಕಾನೂನುಬದ್ಧವಾದ ಫೋನ್ ಸಂಖ್ಯೆಗಳು ಎಂದು SBI ಬ್ಯಾಂಕ್ ಸ್ಪಷ್ಟಪಡಿಸಿದೆ. SBI ಹೆಸರಿನಲ್ಲಿ ಬೇರೆ ಸಂಖ್ಯೆಗಳಿಂದ ಬರುವ ಕರೆಗಳ ಬಗ್ಗೆ ಎಚ್ಚರ ವಹಿಸುವಂತೆ ಬ್ಯಾಂಕ್ ಎಚ್ಚರಿಸಿದೆ.

 

ಗ್ರಾಹಕರನ್ನು ಸಂಪರ್ಕಿಸಲು ಬ್ಯಾಂಕ್ ಬಳಸುವ ಅಧಿಕೃತ ಸಂಖ್ಯೆಗಳ ಪಟ್ಟಿಯನ್ನು SBI ಬಿಡುಗಡೆ ಮಾಡಿದೆ.

1600-01-8000

1600-01-8003
1600-01-8006

1600-11-7012
1600-11-7015
1600-01-8001
1600-01-8004
1600-01-8007
1600-11-7013
1600-00-1351
1600-01-8002
1600-01-8005
1600-11-7011
1600-01-7014
1600-10-0021

 

ಈ ಮೇಲೆ ನಮೂದಿಸಿದ ನಂಬರ್ ಗಳಿಂದ ಮಾತ್ರ ಬ್ಯಾಂಕ್ ಕರೆ ಮಾಡುತ್ತದೆ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿದೆ.