20 June 2025 | Join group

ನಿಮಗೆ ಹಸಿ ಬೆಳ್ಳುಳ್ಳಿ ತಿನ್ನುವ ಹವ್ಯಾಸವಿದೆಯೆ? ಇದರ ಆರೋಗ್ಯ ಪ್ರಯೋಜನಗಳನ್ನು ಇಲ್ಲಿ ತಿಳಿದುಕೊಳ್ಳಿ!

  • 07 Jun 2025 03:31:56 AM

ಸಾಮಾನ್ಯವಾಗಿ ಹಸಿ ಬೆಳ್ಳುಳ್ಳಿ ತಿನ್ನಲು ಜನ ಹಿಂದೇಟು ಹಾಕುತ್ತಾರೆ. ಬೆಳ್ಳುಳ್ಳಿ ತಿಂದ ನಂತರ ಬಾಯಿಯಿಂದ ಬರುವ ವಾಸನೆ ಆತನ ಪಕ್ಕಕ್ಕೆ ಯಾರೂ ಸುಳಿಯದಂತೆ ಮಾಡುತ್ತದೆ. ಹಸಿ ಬೆಳ್ಳುಳ್ಳಿ ತಿಂದರೆ ಅದರ ಕಟುವಾದ, ಖಾರವಾದ ಮತ್ತು ಗಂಧಕದ ರುಚಿ ನಾಲಗೆಯನ್ನು ಕತ್ತರಿಸುತ್ತದೆ.

 

ಆದರೂ, ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ:

 

  • ಬೆಳಿಗ್ಗೆ ಎದ್ದಾಕ್ಷಣ ಹಸಿ ಬೆಳ್ಳುಳ್ಳಿ ಸೇವಿಸಿದರೆ ದೇಹದ ಕೊಬ್ಬು ಕರಗಲು ಪ್ರಾರಂಭವಾಗುತ್ತದೆ. ಆದರೆ ಬೆಳ್ಳುಳ್ಳಿ ಸೇವಿಸುವಾಗ ಹೊಟ್ಟೆ ಖಾಲಿಯಾಗಿರಬೇಕು. ಇದು ದೇಹದಲ್ಲಿನ ವಿಷಕಾರಿ ದ್ರವ್ಯಗಳನ್ನು ಹೊರಗಿಡುತ್ತದೆ.

 

  • ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿಂದರೆ ಹಸಿವು ಹೆಚ್ಚಾಗುತ್ತದೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿಯುಂಟಾಗುತ್ತದೆ. ಊಟದ ನಂತರ ತಿಂದರೆ ಪಚನಕ್ರಿಯೆ ಸುಗಮವಾಗುತ್ತದೆ.

 

  • ಬೆಳ್ಳುಳ್ಳಿಯ ಎಸಳನ್ನು ಬಾಯಲ್ಲಿ ಇಟ್ಟುಕೊಂಡರೆ ಜ್ವರ ಅಥವಾ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ ಮತ್ತು ರಕ್ತ ಸಂಚಾರ ಸುಧಾರಣೆಯಾಗುತ್ತದೆ.

 

  • ಕಬ್ಬಿಣಾಂಶದ ಕೊರತೆಯಿಂದ ಉಂಟಾಗುವ ರಕ್ತಹೀನತೆ ಮತ್ತು ನಿಶಕ್ತಿ ಸಮಸ್ಯೆಗಳಿಗೆ ಬೆಳ್ಳುಳ್ಳಿ ಸಹಾಯಕವಾಗುತ್ತದೆ. ಇದಲ್ಲದೆ, ಇದರಲ್ಲಿ ರೋಗ ನಿರೋಧಕ ಶಕ್ತಿಯೂ ಇದೆ.

 

ಆದ್ದರಿಂದ, ಅಡುಗೆ ಪದಾರ್ಥಗಳಲ್ಲಿ ಬಳಸಿದರೆ ಉತ್ತಮ, ಆದರೆ ಹಸಿಯಾಗಿ ಸೇವಿಸಿದರೆ ಇನ್ನೂ ಹೆಚ್ಚು ಆರೋಗ್ಯಲಾಭ ದೊರೆಯುತ್ತದೆ.