ಮುಂಬಯಿ ಮಾಯಾನಗರಿಯ ಪ್ರತಿಷ್ಠಿತ ಮತ್ತು ತುಂಬಾ ಹಳೆಯದಾದ ತಾಜ್ ಹೋಟೆಲ್ ಭಾರತದ ಮೊದಲ ಐಷಾರಾಮಿ ಹೋಟೆಲ್ ಆಗಿದೆ. ಭಾರತವನ್ನು ವಿಶ್ವ ಪ್ರಯಾಣಿಕರ ನಕ್ಷೆಯಲ್ಲಿ ಇರಿಸುವ ಸಲುವಾಗಿ ಸರ್ ಜಮ್ಸೆಟ್ಜಿ ಟಾಟಾ ಅವರು 1903 ರಲ್ಲಿ ತಾಜ್ ಪ್ಯಾಲೇಸ್ ನ್ನು ನಿರ್ಮಿಸಿದರು.
ಇಂದಿನ ದಿನಗಳಲ್ಲಿ ಹೈಟೆಕ್ ಜಾಹೀರಾತುಗಳು, ಡಿಜಿಟಲ್ ಮೀಡಿಯಾ, ಆನ್‌ಲೈನ್ ಆಫರ್‌ಗಳ ಯುಗವಿದ್ದರೂ, ಶತಮಾನದ ಹಿಂದೆ ಹೋಟೆಲ್‌ಗಳು ತಮ್ಮ ಸೇವೆಗಳನ್ನು ಜನರಿಗೆ ತಿಳಿಸಲು ಹೀಗೆ ಪತ್ರಿಕೆ ಅಥವಾ ಲೀಫ್ಲೆಟ್‌ಗಳನ್ನು ಬಳಸುತ್ತಿದ್ದವು. ಈ ಪ್ರತಿಷ್ಠಿತ 5 ಸ್ಟಾರ್ ಐಷಾರಾಮಿ ಹೋಟೆಲಿನ 1907 ರಲ್ಲಿ ಪ್ರಕಟಿಸಲಾದ ಅಪರೂಪದ ಜಾಹಿರಾತು ಪತ್ರಿಕೆಯ (leaflet) ಪ್ರತಿಯೊಂದು ದೊರೆತಿದೆ.
ಈ ಜಾಹೀರಾತು ಪತ್ರಿಕೆಯಲ್ಲಿ ತಾಜ್ ಹೋಟೆಲ್ ನೀಡುತ್ತಿದ್ದ ಆ ಕಾಲದ ಆಲಂಕರಿಕ ಸೇವೆಗಳು, ಭೋಜನ ವ್ಯವಸ್ಥೆ, ಕೊಠಡಿಗಳ ವಿವರ, ಹಾಗು ಆಧುನಿಕ ಸೌಲಭ್ಯಗಳ ಪರಿಚಯವಿದೆ. 1907ರಲ್ಲಿ ಈ ಮಟ್ಟದ ವಿಶಿಷ್ಟ ಸೇವೆಗಳನ್ನು ನೀಡುತ್ತಿತ್ತು ಎಂಬುದೇ ತನ್ನದೇ ಆದ ವಿಷ್ಮಯ.
ಮೂಲಗಳ ಪ್ರಕಾರ, ಆ ಕಾಲದಲ್ಲಿ ತಾಜ್ ಪ್ಯಾಲೇಸ್ ಹೋಟೆಲ್ ನ ಎರಡು ಮಲಗುವ ಕೋಣೆಯ ಒಂದು ದಿವಸದ ಶುಲ್ಕ ರೂ.6 ಆಗಿತ್ತು. ಆಶ್ಚರ್ಯವೆಂದರೆ, ಅಂದಿನ ಕಾಲದಲ್ಲಿ ಮಾಸಿಕ ಸರಾಸರಿ ಸಂಬಳ 6 ರೂ ಆಗಿತ್ತು ಹೇಳಲಾಗುತ್ತದೆ.
ಈ ಪತ್ರಿಕೆಯನ್ನು ನೋಡಿದಾಗ, ಆ ಕಾಲದ ಮುದ್ರಣ ಶೈಲಿ, ಭಾಷಾ ಬಳಸಿಕೆ, ಮತ್ತು ಗ್ರಾಹಕರಿಗೆ ತಲುಪಿಸಲು ತೆಗೆದುಕೊಂಡ ಶ್ರಮ ಸ್ಪಷ್ಟವಾಗಿ ಕಾಣಿಸುತ್ತದೆ. ನಿಮಗೂ ಈ ಐತಿಹಾಸಿಕ ಜಾಹೀರಾತಿನ ನೋಟ ನೋಡಬೇಕೆ? ಇಲ್ಲಿ ಇದರ ಪ್ರತಿ ಚಿತ್ರವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಇತಿಹಾಸವನ್ನು ಆಸಕ್ತಿಯಿಂದ ಇಚ್ಛಿಸುವವರಿಗಾಗಿ ಇದು ಒಂದು ಸಾಂಸ್ಕೃತಿಕ ಸಂಗ್ರಹ.