ಇತ್ತೀಚಿನ ದಿನಗಳಲ್ಲಿ ರೂ. 500 ನೋಟಗೆ ಸಂಬಂಧಪಟ್ಟ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 2026 ರ ವೇಳೆಗೆ ₹500 ನೋಟುಗಳನ್ನು ಸರಕಾರ ರದ್ದುಗೊಳಿಸಲಿದೆ ಎಂಬ ಸುದ್ದಿ ಪ್ರಸಾರವಾಗುತ್ತಿದೆ.
ಈ ಬಗ್ಗೆ ಭಾರತ ಸರಕಾರದ ಪರಿಶೀಲನೆ(Fact Check) ಅಕೌಂಟ್ ನಲ್ಲಿ ಈ ಬಗ್ಗೆ ಸ್ಪಷ್ಟೀಕರಣ ನೀಡಿದೆ. 'ಮಾರ್ಚ್ 2026 ರಲ್ಲಿ ನೋಟು ರದ್ದತಿಯ ಕುರಿತಾದ ಹೇಳಿಕೆಗಳು ಸುಳ್ಳು ಮತ್ತು ಸಾಮಾಜಿಕ ಮಾಧ್ಯಮಗಳ ವೇದಿಕೆಗಳ ಮೂಲಕ ಜನಸಾಮಾನ್ಯರಲ್ಲಿ ತಪ್ಪು ಮಾಹಿತಿಯನ್ನು ಹರಡುವ ಪ್ರಯತ್ನ ನಡೆಯುತ್ತಿದೆ' ಎಂದು ತಿಳಿಸಿದೆ.
ಮುಂದಕ್ಕೆ ಬರೆದು 'ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಯಾವುದೇ ಸಂಭಾವ್ಯ ಅಥವಾ ಮುಂಬರುವ ನೋಟಿನ ಅಪನಗದೀಕರಣ ಕ್ರಮದ ಬಗ್ಗೆ ಯಾವುದೇ ಪ್ರಕಟಣೆಗಳನ್ನು ನೀಡಿಲ್ಲ' ಎಂದು ತಿಳಿಸಿದೆ.
ಆದ್ದರಿಂದ, ರೂ. 500 ನೋಟುಗಳು 2026 ರಲ್ಲಿ ರದ್ದು ಆಗಲ್ಲ ಮತ್ತು ಚಾಲ್ತಿಯಲ್ಲಿರುತ್ತದೆ. ಯಾವುದೇ ಸುದ್ದಿಯನ್ನು ನಂಬುವ ಅಥವಾ ಹಂಚಿಕೊಳ್ಳುವ ಮೊದಲು ಅದನ್ನು ಯಾವಾಗಲು ಅಧಿಕೃತ ಮೂಲಗಳಿಂದ ಪರಿಶೀಲಿಸಬೇಕೆಂದು ಸರಕಾರವು ನಾಗರಿಕರಿಗೆ ವಿನಂತಿಸಿದೆ.