19 June 2025 | Join group

ಮಹಿಳೆಯರು ತಮ್ಮ ಫೋನ್ ಗಳಲ್ಲಿ ಈ ನಂಬರ್ ಗಳನ್ನು ಸೇವ್ ಮಾಡಿಟ್ಟುಕೊಂಡರೆ ತುಂಬಾ ಉತ್ತಮ

  • 09 Jun 2025 11:05:31 PM

ಹೆಣ್ಣು ತನ್ನನ್ನು ರಕ್ಷಿಸಿಕೊಳ್ಳಲು ಅವಳಲ್ಲಿರುವ ಶಕ್ತಿಯೇ ಸಾಕು ಆದರೆ ತಕ್ಷಣ ಸಹಾಯಕ್ಕೆ ಕೆಲವು ಸುರಕ್ಷಿತ ನಂಬರ್ ಗಳನ್ನೂ ತನ್ನ ಮೊಬೈಲ್ ನಲ್ಲಿ ಶೇಖರಣೆ ಮಾಡಿಟ್ಟುಕೊಳ್ಳುವುದು ತುಂಬಾ ಉತ್ತಮ. ದೌರ್ಜನ್ಯ ಅಥವಾ ಯಾವುದೇ ರೀತಿಯ ಅಪಾಯಗಳು ಎದುರಾದಂತಹ ಸಂದರ್ಭದಲ್ಲಿ ಈ ಸಹಾಯವಾಣಿ ನಂಬರ್ ಗಳು ನಿಮ್ಮ ಮೊಬೈಲ್ ನಲ್ಲಿ ಇದ್ದರೆ ತುಂಬಾ ಉಪಯೋಗಕ್ಕೆ ಬರಲಿದೆ.

 

ಬನ್ನಿ ನೋಡೋಣ ಯಾವೆಲ್ಲಾ ಸುರಕ್ಷತೆಗೆ ಸಂಬಂಧಪಟ್ಟ ನಂಬರ್ ಗಳು ನಿಮ್ಮ ಮೊಬೈಲ್ ನಲ್ಲಿ ಸೇವ್ ಆಗಿ ಇರಬೇಕು,

 

ಪೊಲೀಸ್ ಸಹಾಯಕ್ಕಾಗಿ - 100

ಈ ನಂಬರ್ ಪೊಲೀಸರ ತುರ್ತು ಸೇವೆಯ ನಂಬರ್ ಆಗಿದ್ದು, ನೀವು ಕರೆ ಮಾಡಿದ ಕೂಡಲೇ ನಿಮ್ಮ ಸ್ಥಳದ ಮಾಹಿತಿ ಪಡೆದು ಹತ್ತಿರದ ಪೊಲೀಸ್ ಠಾಣೆಗೆ ರವಾನಿಸಲಾಗುತ್ತದೆ.

 

ಆಂಬುಲೆನ್ಸ್ ಸೇವೆಗೆ - 108

ವೈದಕೀಯ ಸೇವೆ ಪಡೆಯಲು ಈ ನಂಬರ್ ಮೊಬೈಲ್ ನಲ್ಲಿ ಇರಬೇಕು.

 

ಮಹಿಳಾ ಸಹಾಯವಾಣಿ - 181 ಮತ್ತು 1091

ರಾಷ್ಟ್ರೀಯ ಮಹಿಳಾ ಆಯೋಗದ ಸಹಾಯವಾಣಿ ಸಂಖ್ಯೆ ಇದಾಗಿದೆ. ಯಾವುದೇ ರೀತಿಯ ದೌರ್ಜನ್ಯ, ಕೌಟುಂಬಿಕ ಹಿಂಸೆ ಅಥವಾ ಕಿರುಕುಳ ಇದ್ದರೆ ಈ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಬಹುದು. ಯಾರಾದರೂ ಹಿಂಬಾಲಿಸಿದರೆ ಅಥವಾ ಬೆದರಿಕೆ ಹಾಕಿದಂತಹ ಸಂದರ್ಭದಲ್ಲಿ ಈ ನಂಬರ್ ಗಳಿಗೆ ಕರೆ ಮಾಡಿ ಸಹಾಯವನ್ನು ಪಡೆಯಬಹುದು.

 

ಮಕ್ಕ ಸಹಾಯಕ್ಕೆ - 1098

ಮಕ್ಕುಳು ಅಪಾಯದಲ್ಲಿದ್ದಾಗ ಈ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ. ಮಕ್ಕಳು ಮಾತ್ರವಲ್ಲದೆ ಹದಿ ಹರೆಯದ ಹುಡುಗಿಯರಿಗೂ ಸಹ ಈ ನಂಬರ್ ಗೆ ಕರೆ ಮಾಡಿ ಕಂಪ್ಲೇಂಟ್ ಮಾಡಬಹುದು. ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳು ಕಾಣೆಯಾದರೆ ಈ ಎಲ್ಲಾ ಸಮಸ್ಯೆಗಳಿಗೆ ಮೇಲೆ ಕಾಣಿಸಿದ ನಂಬರ್ ಗೆ ಕರೆ ಮಾಡಿ ಸಹಾಯ ಕೋರಬಹುದು.

 

ಈ ಎಲ್ಲಾ ನಂಬರ್ ಗಳನ್ನೂ ಮೊಬೈಲ್ ನಲ್ಲಿ ಸರಿಯಾದ ಹೆಸರು ಕೊಟ್ಟು ಸೇವ್ ಮಾಡಿ ಮತ್ತು ತುರ್ತು ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಪ್ರಯೋಜನ ಪಡೆಯಿರಿ.