19 June 2025 | Join group

'ದಗ್ಗ್ ದಗ್ಗ್' ರಾಯಲ್ ಎನ್‌ಫೀಲ್ಡ್ ಬುಲೆಟ್ ನ ಬೆಲೆಯಲ್ಲಿ ಏರಿಕೆ

  • 17 Jun 2025 10:41:20 AM

ಒಂದು ಕಾಲದಲ್ಲಿ ಬುಲೆಟ್ ಬೈಕ್ ರಸ್ತೆಗಿಳಿದರೆ, ಅದರ "ದಗ್ಗ್ ದಗ್ಗ್" ಶಬ್ದವೇ ಹೃದಯ ಕದಿಯುತ್ತಿತ್ತು. ಗಟ್ಟಿತನದ ಪ್ರತೀಕವಾಗಿದ್ದ ಆ ಶಬ್ದ, ಜನರ ಹೃದಯದಲ್ಲಿ ಭಯಕ್ಕೂ, ಹೆಮ್ಮೆಗೂ ಕಾರಣವಾಗುತ್ತಿತ್ತು. ಈಗಿನ ಬುಲೆಟ್ ನಯವಾಗಿ ಚಲಿಸುತ್ತಿದ್ದರೂ, ಆ ಹಳೆಯ ಶಬ್ದದ ತೀವ್ರತೆಯೇ ಮರೆಯಲಾರದ ನೆನಪಾಗಿ ಉಳಿದಿದೆ.

 

ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಭಾರತದ ಮೂರನೇ ಅತ್ಯುತ್ತಮ ಮಾರಾಟವಾಗುವ ಜನಪ್ರಿಯ ಬೈಕ್. 350ಸಿಸಿ ಬುಲೆಟ್ ಗೆ ಮಾರ್ಕೆಟ್ ನಲ್ಲಿ ಬೇಡಿಕೆ ಕೂಡ ಜಾಸ್ತಿ ಇದೆ. ಆದರೆ ಇದೀಗ ಬೇಡಿಕೆ ಹೆಚ್ಚಾಗಿದ್ದರು ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಮೇಲೆ ರೂ.2000 ದಿಂದ ರೂ 3000 ಸಾವಿರದವರೆಗೆ ಹೆಚ್ಚಿಸಿದೆ.

 

ಮಿಲಿಟರಿ ಕಪ್ಪು ಮತ್ತು ಮಿಲಿಟರಿ ಕೆಂಪು ರೂಪಾಂತರಗಳು ಈ ಹಿಂದೆ 1.74 ಲಕ್ಷ ರೂ.ಗಳ ಬೆಲೆಯನ್ನು ಹೊಂದಿದ್ದವು ಆದರೆ ಬೆಲೆಯಲ್ಲಿ ಏರಿಕೆ ಕಂಡಿವೆ. ಡರ್ಡ್ ಕಪ್ಪು ಮತ್ತು ಸ್ಟ್ಯಾಂಡರ್ಡ್ ಮರೂನ್ ರೂಪಾಂತರಗಳು ಈಗ 2 ಲಕ್ಷ ರೂ.ಗಳ ಬೆಲೆಯನ್ನು ಹೊಂದಿದ್ದು, ಅವುಗಳ ಹಿಂದಿನ ಬೆಲೆ 1.97 ಲಕ್ಷ ರೂ.ಗಳಿಂದ ಹೆಚ್ಚಾಗಿದೆ. ಪ್ರೀಮಿಯಂ ಕಪ್ಪು ಗೋಲ್ಡ್ ರೂಪಾಂತರವು 2.16 ಲಕ್ಷ ರೂ.ಗಳಿಂದ 2.18 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ.

 

ಬಹುಶಃ, ಉತ್ಪಾದನಾ ವೆಚ್ಚದ ಹೆಚ್ಚಾಗಿರುವ ಕಾರಣ ರಾಯಲ್ ಎನ್‌ಫೀಲ್ಡ್ ಬುಲೆಟ್ ಗಳ ಬೆಲೆ ಹೆಚ್ಚಾಗಿದೆ ಎನ್ನಲಾಗಿದೆ. ಹೊಸ ಮಾದರಿಯಲ್ಲಿ ಬರುವ ಬೈಕ್ ಗಳಲ್ಲಿ ಕ್ಲಚ್ ಮಾರ್ಪಾಡು ಮಾಡಿರುವುದರಿಂದ ಕ್ಲಚ್ ಕಾರ್ಯಾಚರಣೆಯನ್ನು ಹಗುರಗೊಳಿಸುತ್ತದೆ ಮತ್ತು ಗೇರ್ ಶಿಫ್ಟ್‌ಗಳನ್ನು ಸುಗಮಗೊಳಿಸುತ್ತದೆ, ರೈಡರ್ ಸೌಕರ್ಯವನ್ನು ಹೆಚ್ಚಿಸುತ್ತದೆ ಮತ್ತು ದೀರ್ಘ ಸವಾರಿಗಳಲ್ಲಿ ಆಯಾಸವನ್ನು ಕಡಿಮೆ ಮಾಡುತ್ತದೆ.