01 July 2025 | Join group

KSRTC ಬಸ್ ಟಿಕೆಟ್‌ ಬೇಕಾ? ಮೊಬೈಲ್‌ ಸಾಕು – ಮನೆಯಲ್ಲೇ ಕುಳಿತು ಬುಕ್ ಮಾಡಿ

  • 29 Jun 2025 01:45:43 AM

ಇತೀಚಿನ ದಿನಗಳಲ್ಲಿ ಆನ್ಲೈನ್ ಮೂಲಕ ಬಹುತೇಕ ಕೆಲಸ ಕಾರ್ಯಗಳನ್ನು ಸರಳವಾಗಿ ಮುಗಿಸಬಹುದಾಗಿದೆ. ಇದರಿಂದ ಜನರಿಗೆ ಸಮಯದ ಉಳಿತಾಯವೂ ಆಗುತ್ತದೆ ಜೊತೆಗೆ ಸೇವೆ ಪಡೆಯುವುದು ಕೂಡ ಸುಲಭವಾಗುತ್ತದೆ. ಬಸ್ ಟಿಕೆಟ್ ಬುಕ್ಕಿಂಗ್ ಕೂಡ ಇಂತಹ ಡಿಜಿಟಲ್ ಸೌಲಭ್ಯಗಳಲ್ಲಿ ಪ್ರಮುಖವಾದದ್ದು.

 

ನೀವು ಆನ್ಲೈನ್‌ನಲ್ಲಿ ಬಸ್ ಟಿಕೆಟ್ ಬುಕ್ ಮಾಡಿದರೆ ಮನೆಯಲ್ಲಿಯೇ ಕುಳಿತುಕೊಂಡು ವಿವಿಧ ಬಸ್ ಆಯ್ಕೆಗಳನ್ನು ಪರಿಶೀಲಿಸಿ ಅನುಕೂಲಕರವಾದ ಟಿಕೆಟ್ ಆಯ್ಕೆ ಮಾಡಬಹುದು. ಟಿಕೆಟ್ ಬುಕ್ಕಿಂಗ್ ಸಮಯವನ್ನು ಉಳಿಸುವುದರ ಜೊತೆಗೆ ಕ್ಯೂನಲ್ಲಿ ನಿಲ್ಲಬೇಕಾದ ಅವಶ್ಯಕತೆ ಇಲ್ಲ. ಪ್ರಯಾಣದ ದಿನಾಂಕ, ಸಮಯ ಹಾಗೂ ಆಸನಗಳ ಲಭ್ಯತೆ ಬಗ್ಗೆ ಸ್ಪಷ್ಟ ಮಾಹಿತಿಯನ್ನು ತಕ್ಷಣವೇ ಪಡೆಯಬಹುದಾಗಿದೆ.

 

ನೀವು https://ksrtc.in ವೆಬ್ ಸೈಟ್ ಗೆ ಲಾಗಿನ್ ಆಗುವ ಮೂಲಕ ನಿಮ್ಮ ಬಸ್ ಟಿಕೆಟುಗಳನ್ನು ಸುಲಭವಾಗಿ ಪಡೆಯಬಹುದು. ನಿಮಗೆ ಒನ್ ವೆ(One way) ಟಿಕೆಟ್ ಬೇಕಾ ಅಥವಾ ಟೂ ವೆ(Two way) ಟಿಕೆಟ್ ಬೇಕಾ ಎನ್ನುವುದನ್ನು ನಿರ್ಧರಿಸಿ, ಎಲ್ಲಿಂದ ಎಲ್ಲಿಗೆ ಪ್ರಯಾಣ, ಪ್ರಯಾಣದ ದಿನಾಂಕವನ್ನು ನಮೂದಿಸಿದರೆ ನಿಮಗೆ ಬೇಕಾದ ಬಸ್ಸಿನ ವಿವರ, ಸಮಯ, ಟಿಕೆಟ್ ದರ ಎಲ್ಲವು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಸಿಗುತ್ತದೆ.

 

ಡಿಜಿಟಲ್ ಯುಗದಲ್ಲಿ ಸಾಗುತ್ತಿರುವ ಇಂದಿನ ಜನತೆ ಈ ಎಲ್ಲಾ ಸೌಕರ್ಯಗಳನ್ನು ತಮ್ಮ ಮೊಬೈಲ್ ನಿಂದ ಸುಲಭವಾಗಿ ಪಡೆಯಬಹುದಾಗಿದೆ. ಡಿಜಿಟಲ್ ಪಾವತಿಯ ಮೂಲಕ ಸುರಕ್ಷಿತವಾಗಿ ಹಣ ಪಾವತಿಸುವ ಅವಕಾಶವಿದ್ದು ಮನೆಯಲ್ಲೇ ಇದ್ದು ಕೊಂಡು ಬುಕಿಂಗ್ ಕೆಲಸವನ್ನು ಸುಲಭವಾಗಿ ಮುಗಿಸಬಹುದು.

ಇದನ್ನೂ ಓದಿ : ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಸೇವೆಯನ್ನು ಆನ್ಲೈನ್ (E-Sevas) ಮೂಲಕ ಬುಕ್ ಮಾಡುವ ವಿಧಾನ