ಪ್ರಧಾನಮಂತ್ರಿ ಆವಾಸ್ ಯೋಜನೆ (PMAY-Scheme) ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಗೃಹ ಯೋಜನೆಯಾಗಿದೆ. ಈ ಯೋಜನೆ ಬಡ ಕುಟುಂಬಗಳಿಗೆ ಅಥವಾ ಬಡತನ ರೇಖೆಯ ಕೆಳಗೆ ಇರುವ ಕುಟುಂಬಗಳಿಗೆ ಮನೆ ಕಟ್ಟಲು ಹಣ ಸಹಾಯ ನೀಡಲಾಗುತ್ತದೆ.
ಈ ಯೋಜನೆಯ ಲಾಭ ಪಡೆಯಲು ಬೇಕಾದ ಅವಶ್ಯಕ ದಾಖಲೆಗಳ ವಿವರ ಈ ಕೆಳಗಿನಂತಿದೆ:
ಆಧಾರ್ ಕಾರ್ಡ್ (Aadhar Card)
- ಅರ್ಜಿದಾರರ ಮತ್ತು ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಪ್ರತಿ
ಭೂಮಿ ಸಂಬಂಧಿತ ದಾಖಲೆಗಳು(Property Documents)
- ಪ್ರಸ್ತುತದ ಮನೆ ಇಲ್ಲ ಎಂಬುವುದನ್ನು ಖಾತರಿ ಪಡಿಸಲು
- ಜಮೀನಿನ ಪಟ್ಟಾ
- ಖಾತಾ ಮತ್ತು ರಿಜಿಸ್ಟ್ರಿ ದಾಖಲೆಗಳು
- ನಕ್ಷೆ ಮತ್ತು ಮನೆಯನ್ನು ಕಟ್ಟಲು ಅನುಮತಿ ಪತ್ರ
ಬ್ಯಾಂಕ್ ಖಾತೆ ವಿವರಗಳು(Bank Account Details)
- ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆ ನೀಡತಕ್ಕದ್ದು
ಪಾನ್ ಕಾರ್ಡ್(PAN Card)
- ಪಾನ್ ಕಾರ್ಡ್ ಹೊಂದಿದಲ್ಲಿ
ನಿವಾಸ ಪ್ರಮಾಣ ಪತ್ರ(Domicile Certificate)
- ರಾಜ್ಯ/ಗ್ರಾಮ ನಿವಾಸಿಯೆಂದು ತೋರಿಸಲು
ಆದಾಯ ಪ್ರಮಾಣ ಪತ್ರ (Income Certificate)
- ವಾರ್ಷಿಕ ಆದಾಯವ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ(Caste Certificate)
- ಮೀಸಲು ವರ್ಗದ ಫಲಾನುಭವಿಗಳಿಗೆ
https://pmay.gov.in ವೆಬ್ ಸೈಟ್ ಗೆ ಲಾಗಿನ್ ಆಗಬಹುದು ಇಲ್ಲವೇ ಆನ್ ಲೈನ್ ಸೆಂಟರ್ ಗಳಿಗೆ ಭೇಟಿ ಕೊಟ್ಟು ನಿಮ್ಮ ದಾಖಲೆಗಳನ್ನು ಸಂಪೂರ್ಣಗೊಳಿಸಬಹುದು. SC/ST/OBC ವರ್ಗದವರಿಗೆ ಅಪ್ಲಿಕೇಶನ್ ಹಾಕಬಹುದಾಗಿದೆ.