01 July 2025 | Join group

ಪ್ರಪಂಚದಲ್ಲಿ ಅತಿ ಹೆಚ್ಚು ಹಲಸಿನ ಹಣ್ಣು ಬೆಳೆಸುವ ದೇಶ ಯಾವುದು? ಭವಿಷ್ಯದ ಲಾಭದಾಯಕ ಹಣ್ಣು!

  • 01 Jul 2025 11:54:40 AM

ನಿಮಗೆ ತಿಳಿದಿದೆಯೆ? ಹಲಸಿನ ಹಣ್ಣಿನ ಅತಿ ದೊಡ್ಡ ಉತ್ಪಾದಕ ದೇಶ ಯಾವುದು ಎಂದು ನೀವು ಭಾವಿಸುತ್ತೀರಿ? ಮಾಹಿತಿಗಾಗಿ ಹೇಳುತ್ತೇವೆ, ಹಲಸು ಬಾಂಗ್ಲಾದೇಶದ ರಾಷ್ಟ್ರೀಯ ಹಣ್ಣು ಆಗಿದೆ.

 

ಆದರೆ, ವಿಶ್ವದಲ್ಲೇ ಅತೀ ಹೆಚ್ಚು ಹಲಸಿನ ಹಣ್ಣು ಉತ್ಪಾದಿಸುವ ದೇಶ ಅದು ನಮ್ಮ ಭಾರತ. ಭಾರತ ಪ್ರತಿ ವರ್ಷ 1.4 ಮಿಲಿಯನ್ ಟನ್ ಹಲಸಿನ ಹಣ್ಣು ಬೆಳೆಯುತ್ತದೆ. ಅದರ ಹೆಚ್ಚಿನ ಭಾಗ ದೇಶದೊಳಗೇ ಬಳಕೆಯಾಗುತ್ತದೆ. ಇತ್ತೀಚೆಗೆ ವಿದೇಶದ ಮಾರುಕಟ್ಟೆಯಲ್ಲಿಯೂ ಭಾರತೀಯ ಹಲಸಿಗೆ ಬೇಡಿಕೆ ಹೆಚ್ಚಾಗಿದೆ. ದೊಡ್ಡ ಸೂಪರ್ ಮಾರ್ಕೆಟ್ ಗಳಲ್ಲಿ ಅತೀ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.

 

ಮಧ್ಯಪ್ರಾಚ್ಯ, ಯುರೋಪ್ ಮತ್ತು ಅಮೆರಿಕದಂತಹ ಮಾರುಕಟ್ಟೆಗಳಿಗೆ ಹಲಸಿನ ರಫ್ತು ನಿಧಾನವಾಗಿ ಬೆಳೆಯುತ್ತಿದೆ. ಇದನ್ನು ತಾಜಾ, ಹೆಪ್ಪುಗಟ್ಟಿದ, ಒಣಗಿದ ಅಥವಾ ಡಬ್ಬಿಯಲ್ಲಿ ಹಾಕಿ ಮಾರಾಟ ಮಾಡಬಹುದಾಗಿದೆ.

 

ಸದ್ಯಕ್ಕೆ ಭಾರತ 1.4 ಮಿಲಿಯನ್ ಟನ್, ಬಾಂಗ್ಲಾದೇಶ 1.0 ಮಿಲಿಯನ್ ಟನ್, ಥೈಲ್ಯಾಂಡ್ 0.9 ಮಿಲಿಯನ್ ಟನ್, ಇಂಡೋನೇಷ್ಯಾ 0.6 ಮಿಲಿಯನ್ ಟನ್ ಮತ್ತು ಶ್ರೀಲಂಕಾ 0.3 ಮಿಲಿಯನ್ ಟನ್ ನಷ್ಟು ಪ್ರತಿ ವರ್ಷ ಹಲಸಿನ ಹಣ್ಣಿನ ಉತ್ಪಾದನೆ ಮಾಡುತ್ತದೆ.

 

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹಲಸಿನ ಹಣ್ಣು ಉತ್ಪಾದಿಸುವ ದೇಶ. ಇದನ್ನು ಮನೆ ತೋಟಗಳು, ಪ್ರತ್ಯೇಕ ತೋಟಗಳು ಮತ್ತು ಅರಣ್ಯ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಈ ಹಣ್ಣನ್ನು ಆಹಾರ, ಔಷಧ ಮತ್ತು ಸಸ್ಯಾಹಾರಿ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ.

 

ಮುಂದಿನ ದಿನಗಳಲ್ಲಿ ಹಲಸಿನ ಹಣ್ಣಿನ ಡಿಮ್ಯಾಂಡ್ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಯಶಸ್ವಿ ಕೃಷಿಕರ ಅಭಿಪ್ರಾಯದಂತೆ, ಹಲಸು ಬೆಳೆಯುವ ಮೂಲಕ ಭವಿಷ್ಯದಲ್ಲಿ ಉತ್ತಮ ಆದಾಯ ಸಾಧ್ಯವಿದೆ. ಈಗಾಗಲೇ ಹಲವರು ಈ ದಿಕ್ಕಿನಲ್ಲಿ ಗಮನಹರಿಸುತ್ತಿದ್ದಾರೆ.