ದಕ್ಷಿಣ ಕನ್ನಡ ಜಿಲ್ಲೆಗೆ 2025-26ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ (Weather Based Crop Insurance Scheme - WBCIS) ಸಂಬಂಧಿಸಿ ವಿಮಾಕಂತು ಪಾವತಿಸಲು ಸರ್ಕಾರ ಆದೇಶ ಹೊರಡಿಸಿದ್ದು ಇಂದು ದಿನಾಂಕ 31 ಜುಲೈ 2025 ಅಂತಿಮ ದಿನವಾಗಿರುತ್ತದೆ.
ಬೆಳೆ ಸಾಲ ಹೊಂದಿರುವ ಸದಸ್ಯರು ನಿಗದಿತ ದಿನಾಂಕದೊಳಗೆ ಸಂಘದ ಪ್ರಧಾನ ಕಛೇರಿಯಲ್ಲಿ ವಿಮಾಕಂತು ಪಾವತಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ವಿಮಾಕಂತು ಪಾವತಿಸಲು ರೈತರ ಪಹಣಿ ಆಧಾರ್ ನೊಂದಿಗೆ ಕಡ್ಡಾಯವಾಗಿ ಜೋಡಣೆಯಾಗಿರಬೇಕು ಎಂದು ತಿಳಿಸಿದ್ದಾರೆ. ಅಂದರೆ 'FRUITS ID' ಹೊಂದಿರಬೇಕಾಗುತ್ತದೆ.
ಕಡ್ಡಾಯವಾಗಿ ಬೆಳೆ ವಿವರ ಕಂದಾಯ ಇಲಾಖೆಯ ಭೂಮಿ ದಾಖಲೆಯಲ್ಲಿ ಮುಂಗಾರು ರೈತರ ಬೆಳೆ ಸಮೀಕ್ಷೆ 2024 ಇಂದರಲ್ಲಿ ನಮೂದಾಗಿರಬೇಕು. ವಿಮಾಕಂತು ಪ್ರತಿ ಎಕರೆಗೆ ಅಡಿಕೆ ರೂ. 2,590.08 ಮತ್ತು ಕರಿಮೆಣಸು ರೂ. 951.05 ಆಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.