23 October 2025 | Join group

ಕ್ರೆಡಿಟ್ ಕಾರ್ಡ್ ​ಬಳಕೆದಾರರಿಗೆ ಆರ್​ಬಿಐ(RBI) ನಿಂದ ಬಿಗ್ ಶಾಕ್!

  • 19 Sep 2025 12:59:35 PM

ಸೆಪ್ಟೆಂಬರ್ 15 ರಿಂದ ಆರ್​ಬಿಐನ ಹೊಸ ನಿಯಮ ಜಾರಿಗೆ ಬಂದಿದ್ದು, ಫೋನ್‌ಪೇ, ಪೇಟಿಎಂ, ಕ್ರೆಡ್​ ಮತ್ತು ಅಮೆಜಾನ್ ಪೇ ನಂತಹ ಪ್ರಮುಖ ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳು ರೆಂಟ್ ಪೇಮೆಂಟ್​​ ಸೇವೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.

 

PhonePe, Paytm ಮತ್ತು Credit card ನಂತಹ ಆನ್ಲೈನ್ ಪಾವತಿ ಅಪ್ಲಿಕೇಶನ್ಗಳು ಕ್ರೆಡಿಟ್ ಕಾರ್ಡ್ಗಳನ್ನು ಬಳಸಿಕೊಂಡು ಬಾಡಿಗೆ ಪಾವತಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿವೆ.

 

ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಹೊಸ ನಿಯಮಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬದಲಾವಣೆಯು ಕ್ರೆಡಿಟ್ ಕಾರ್ಡ್ಗಳ ಮೂಲಕ ಸುಲಭವಾಗಿ ಬಾಡಿಗೆ ಪಾವತಿಸುವ ಲಕ್ಷಾಂತರ ಬಾಡಿಗೆದಾರರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೊಸ RBI ಸುತ್ತೋಲೆಯ ಪ್ರಕಾರ, ಪಾವತಿ ಸಂಗ್ರಾಹಕರು ಮತ್ತು ಪಾವತಿ ಗೇಟ್ವೇಗಳು ಅಧಿಕೃತವಾಗಿ ನೋಂದಾಯಿತ ವ್ಯಾಪಾರಿಗಳಿಂದ ಮಾತ್ರ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಬೇಕು.

 

ಯಾಕೆ ಈ ನಿರ್ಧಾರ..?

KYC ಮಾನದಂಡಗಳ ಉಲ್ಲಂಘನೆ ಮೂಲಕ ವಂಚನೆ ಕೇಸ್ ಹೆಚ್ಚಾಗುತ್ತಿದೆ. ಕ್ರೆಡಿಟ್ ಕಾರ್ಡ್ ಬಾಡಿಗೆ ಪಾವತಿಗಳಲ್ಲಿ ಆಗಾಗ ಸರಿಯಾದ ಪರಿಶೀಲನೆ ಇಲ್ಲದೆ ಹಣ ವರ್ಗಾವಣೆ ಮಾಡಿರೋದನ್ನ ಆರ್​ಬಿಐ ಗಮನಿಸಿದೆ. ಕೆಲವರು ಬಾಡಿಗೆಯ ನೆಪದಲ್ಲಿ ನಿಕಟ ಸಂಬಂಧಿಗಳ ಖಾತೆಗಳಿಗೆ ಹಣ ವರ್ಗಾಯಿಸಿ ನಂತರ ಅದನ್ನು ಕಾನೂನುಬಾಹಿರ ಉದ್ದೇಶಗಳಿಗಾಗಿ ಬಳಸಿಕೊಂಡಿದ್ದಾರೆ. ಹೀಗಾಗಿ ಸರಿಯಾದ ಪರಿಶೀಲನೆ ಇಲ್ಲದೆ ಇನ್ಮುಂದೆ ಅಂತಹ ವಹಿವಾಟುಗಳನ್ನು ನಡೆಸಲಾಗುವುದಿಲ್ಲ ಎಂದು ಆರ್​ಬಿಐ ಹೇಳಿದೆ.