ಮೂಲ: ಕಂಪದಕೋಡಿ ವೆದರ್ ರಿಪೋರ್ಟ್ | ಪ್ರಕಟಣೆ: ಸುಧಾವಾಣಿ ವೆದರ್ ಡೆಸ್ಕ್
ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಹಗಲು ಮೋಡ - ಬಿಸಿಲಿನ ವಾತಾವರಣ ಇರಲಿದ್ದು, ಮಧ್ಯಾಹ್ನದ ನಂತರ ಮೋಡ ಬರಬಹುದು. ಸಂಜೆ ಉಡುಪಿ, ದ.ಕ. ಜಿಲ್ಲೆಗಳ ಘಟ್ಟಪ್ರದೇಶಗಳ ಸುತ್ತಮುತ್ತ ಗುಡುಗು ಮಳೆಯ ಮುನ್ಸೂಚನೆ ಇದೆ. ಕಾರ್ಕಳ, ಬೆಳ್ತಂಗಡಿ ಮತ್ತು ಸುಳ್ಯ ತಾಲ್ಲೂಕುಗಳಲ್ಲಿ ಸಂಜೆ ಗುಡುಗು ಮಳೆಯ ಮುನ್ಸೂಚನೆ ಇದೆ. ಕಾಸರಗೋಡು ಮತ್ತು ಪುತ್ತೂರು ಬಂಟ್ವಾಳ ತಾಲ್ಲೂಕುಗಳ ಸಹಿತ ಕರಾವಳಿ ತೀರಪ್ರದೇಶಗಳಲ್ಲಿ ಸಂಜೆಯ ನಂತರ ಮತ್ತು ರಾತ್ರಿ ತುಂತುರು ಅಥವಾ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ನಾಳೆ ಸಂಜೆಯೂ ದ.ಕ ಜಿಲ್ಲೆಯಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ.
ಬಂಗಾಳಕೊಲ್ಲಿಯ ಮೇಲ್ಮೈ ಸುಳಿಗಾಳಿ ಕಾರಣ ದಕ್ಷಿಣ ಭಾರತದಲ್ಲಿ ಗುಡುಗು ಮಳೆ ಮುಂದುವರೆಯಲಿದ್ದು ಸೆ.24ಕ್ಕೆ ವಾಯುಭಾರಕುಸಿತ ಆಗಿ ಸೆ.27ಕ್ಕೆ ಆಂಧ್ರ ಮೂಲಕ ಮಧ್ಯಭಾರತದತ್ತ ಚಲಿಸಬಹುದು. ಇದರಿಂದಾಗಿ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇನ್ನೊಂದು ವಾರ ಗುಡುಗು ಮಳೆ ಮುಂದುವರೆಯಬಹುದು.
ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ನಿನ್ನೆ ಸಂಜೆ ಮತ್ತು ರಾತ್ರಿ ಸಾಮಾನ್ಯ ಮಳೆಯಾಗಿದೆ. ಸುಳ್ಯ ಬೆಳ್ತಂಗಡಿ ಸುತ್ತಮುತ್ತ ಉತ್ತಮ ಮಳೆಯಾಗಿತ್ತು.