23 October 2025 | Join group

ಮಂಗಳೂರಿನಲ್ಲಿ ಪದವೀಧರರಿಗೆ ಉದ್ಯೋಗ ಮೇಳ 2025

  • 22 Sep 2025 02:31:45 PM

ಮಂಗಳೂರು : ನೀವು ಬಿಎ, ಬಿ.ಕಾಂ, ಬಿಬಿಎ, ಬಿ.ಎಸ್ಸಿ., ಬಿಸಿಎ, ಬಿಎಚ್‌ಎಂ, ಎಂ.ಕಾಂ, ಎಂಸಿಎ, ಎಂಬಿಎ, ಬಿಇ, ಬಿ.ಟೆಕ್., ಮತ್ತು ಎಂ.ಟೆಕ್ ಹೊಸ ಪದವೀಧರಾಗಿದ್ದರೆ, ಮಂಗಳೂರು ನಗರದ ಮಣೇಲ್ ಶ್ರೀನಿವಾಸ್ ನಾಯಕ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಬೊಂದೆಲ್‌ನಲ್ಲಿರುವ ಬೆಸೆಂಟ್ ಕ್ಯಾಂಪಸ್‌ನಲ್ಲಿ ಸೆ.25ರಂದು ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಎಂಎಸ್‌ಎನ್‌ಐಎಂ ಕೆರಿಯರ್ ಎಕ್ಸ್‌ಪೋ 2025 – ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

 

ಹೊಸ ಪದವೀಧರರಿಗೆ ಮುಕ್ತವಾಗಿದ್ದು, ತಮ್ಮ ಅಪ್ಡೇಟ್ ಮಾಡಲಾದ ಸಿವಿ ಮತ್ತು ಪ್ರಮಾಣಪತ್ರಗಳೊಂದಿಗೆ ಹಾಜರಾಗಬಹುದಾಗಿದೆ.

 

ಸುಮಾರು 30ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಮತ್ತು ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. ಬ್ಯಾಂಕಿಂಗ್, ಸಾಫ್‌ಟ್ವೇರ್, ಫೈನಾನ್ಸ್, ರಿಟೇಲ್, ಶಿಪ್ಪಿಂಗ್ ಮತ್ತು ವಾಹನೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಕಂಪನಿಗಳು ಪಾಲ್ಗೊಳ್ಳಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಿಲಾಗಿದೆ