ಬೆಂಗಳೂರು: ರಾಜ್ಯದ ಜನತೆಗೆ ಕೆಎಂಎಫ್ ಮತ್ತೊಂದು ದರ ಏರಿಕೆಯ ಶಾಕ್ ನೀಡಿದೆ. ನಂದಿನಿ ತುಪ್ಪದ ದರವನ್ನು ಪ್ರತಿ ಲೀಟರ್‌ಗೆ ₹90 ಏರಿಸಲಾಗಿದೆ.
ಇತ್ತೀಚಿಗಷ್ಟೇ ಜಿಎಸ್‌ಟಿ ದರ ಇಳಿಕೆ ನಂತರ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ್ದ ಕೆಎಂಎಫ್, ಆಗ ತುಪ್ಪದ ದರವನ್ನು ಪ್ರತಿ ಲೀಟರ್‌ಗೆ ₹40 ಇಳಿಕೆ ಮಾಡಿತ್ತು. ಆದರೆ ಈಗ ತುಪ್ಪಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ದಿಢೀರ್ ಆಗಿ ದರ ಏರಿಕೆ ಮಾಡಲಾಗಿದೆ.
ಒಂದು ಲೀಟರ್ ನಂದಿನಿ ತುಪ್ಪದ ದರವನ್ನು ಬರೋಬ್ಬರಿ ₹90 ಹೆಚ್ಚಿಸಿ, ಹೊಸದಾಗಿ ₹700 ಎಂದು ನಿಗದಿ ಮಾಡಲಾಗಿದೆ. ಇದು ಜನಸಾಮಾನ್ಯರಿಗೆ ಭಾರಿ ಹೊರೆ ಆಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಹಾಲಿನ ದರ ಏರಿಕೆ ಸಾಧ್ಯತೆ ಕುರಿತು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಸುಳಿವು ನೀಡಿದ್ದಾರೆ. ನಂದಿನಿ ತುಪ್ಪದ ಜೊತೆ ಹಾಲಿನ ದರವೂ ಶೀಘ್ರದಲ್ಲೇ ಮತ್ತೆ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.





