ದಕ್ಷಿಣ ಕನ್ನಡ: ಕರಾವಳಿಯಲ್ಲಿ ಮಳೆಯ ಆರ್ಭಟ ತಗ್ಗಿ ಕಳೆದೆರಡು ದಿನಗಳಿಂದ ಬಿಸಿಲಿನ ಬೇಗೆ ಆರಂಭಗೊಂಡಿದೆ.
ಮಳೆಗಾಲದಲ್ಲಿ ದಟ್ಟ ಕಾರ್ಮೋಡಗಳಿಂದ ಮುಸುಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಜು ಮುಸುಕಿದ ವಾತಾವರಣದ ಸೃಷ್ಟಿಯಾಗಿದೆ.
ಇಂದಿನಿಂದ ಸುಮಾರು ತಿಂಗಳ ಕಾಲ ಜಿಲ್ಲೆಯ ಹಸಿರು ವಾತಾವರಣವಿರುವ ಬಂಟ್ವಾಳ, ಪುತ್ತೂರು ಭಾಗದಲ್ಲಿ ಮಂಜು ಮುಸುಕಿದ ವಾತಾವರಣ ಕಂಡು ಬರುವ ಸಾಧ್ಯತೆಯೂ ಇದೆ. ಅದರಲ್ಲೂ ಬೆಟ್ಟ-ಗುಡ್ಡಗಳಿಂದ ಕೂಡಿರುವ ಮುಡಿಪು, ಸಜಿಪ ಮೊದಲಾದ ಕಡೆಗಳಲ್ಲಿ ಇಡೀ ಪ್ರದೇಶವನ್ನೇ ಮಂಜು ಆವರಿಸಿದ್ದು, ರಸ್ತೆಗಳೂ ಮಂಜಿನಿಂದಾಗಿ ಕಾಣಿಸದಂತಹ ಸ್ಥಿತಿಗೆ ತಲುಪಿದೆ.
ದಟ್ಟ ಮಂಜುನ ಕಾರಣಕ್ಕಾಗಿ ರಸ್ತೆಗಳಲ್ಲಿ ಸಂಚರಿಸುವ ಎಲ್ಲಾ ವಾಹನಗಳೂ ಹೆಡ್ ಲೈಟ್ ಗಳನ್ನು ಹಾಕಿಯೇ ಸಂಚರಿಸುತ್ತಿದ್ದು, ಒಂದು ವೇಳೆ ಹೆಡ್ ಲೈಟ್ ಗಳನ್ನು ಹಾಕದೇ ಹೋದಲ್ಲಿ ಎದುರು ಕಡೆಯಿಂದ, ಪಕ್ಕದಿಂದ ಸಂಚರಿಸುವ ಯಾವುದೇ ವಾಹನಗಳು ಕಣ್ಣಿಗೆ ಕಾಣದಷ್ಟು ದಟ್ಟವಾಗಿದೆ ಈ ಮಂಜುಗಳ ಆವರಿಸಿಕೊಂಡಿದೆ.





