ಮಂಗಳೂರು: ವಾಮಂಜೂರು ಕಂಬಳದ ಅಧ್ಯಕ್ಷರು ಮತ್ತು ಕಂಬಳ ಕೋಣಗಳ ಯಜಮಾನರಾದ ವಾಮಂಜೂರು ತಿರುವೈಲ್ ಗುತ್ತು ನವೀನ್ ಚಂದ್ರ ಆಳ್ವ ರವರ ಪುತ್ರ ನದಿಗೆ ಹಾರುವ ಮೂಲಕ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಯುವ ಉದ್ಯಮಿಯಾಗಿದ್ದ ಅಭಿಷೇಕ್ ಆಳ್ವ ಶಾಂಭವಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ವಾಮಂಜೂರು ತಿರುವೈಲ್ ಗುತ್ತು ಕಂಬಳ ಕ್ಷೇತ್ರದಲ್ಲಿ ಹೆಸರುವಾಸಿಯಾದ ಕಂಬಳ ಕೋಣದ ಮನೆತನವಾಗಿದೆ.





