ಮಂಗಳೂರು: ಬೀದಿ ನಾಯಿಗಳ ಹಾವಳಿಯಿಂದ ಬಾಲಕನೊಬ್ಬ ಗಾಯಗೊಂಡ ಘಟನೆ ನಡೆದಿದೆ.
ಮಂಗಳೂರಿನ ಬಜ್ಪೆಯ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೌಹಾರ್ದ ನಗರದಲ್ಲಿ ನಡೆದಿದೆ.
ಬಾಲಕ ಮದರಸದಿಂದ ಬರುವ ಸಂದರ್ಭದಲ್ಲಿ ಬೀದಿನಾಯಿ ಕಚ್ಚಿದ್ದು, ಆತನ ಕೆನ್ನೆಗೆ ಗಾಯವಾಗಿದೆ.
ಕಟೀಲು ಸಮೀಪದ ಆಸ್ಪತ್ರೆಗೆ ಗಾಯಗೊಂಡ ಬಾಲಕ ಅಹಿಲ್ ನನ್ನು ದಾಖಲಿಸಿದ್ದು, ಚಿಕೆತ್ಸೆ ನೀಡಲಾಗಿದೆ.





