10 December 2025 | Join group

ವೈ-ಫೈ, ಟಿವಿ ಇರುವ ಆಟೋ; ಗರ್ಭಿಣಿಯರಿಗೆ ಉಚಿತ ಸವಾರಿ - ಬೆಂಗಳೂರು ಆಟೋ ಚಾಲಕನ ಅದ್ಭುತ ಸೇವೆ

  • 11 Nov 2025 02:21:58 PM

ಬೆಂಗಳೂರು: ನಗರದಲ್ಲಿ ಒಬ್ಬ ಆಟೋ ಚಾಲಕನ ಸಣ್ಣ ಉಪಕ್ರಮವೇ ಈಗ ದೊಡ್ಡ ಚರ್ಚೆಯಾಗಿದೆ. ಮಣಿವೇಲ್ ಸಿ ಎಂಬ ಆಟೋ ಚಾಲಕನು ತನ್ನ ರಿಕ್ಷಾವನ್ನು ಸಂಪೂರ್ಣ ಕಂಫರ್ಟ್ ಆಟೋ ಆಗಿ ರೂಪಿಸಿದ್ದಾರೆ.

 

ಆಟೋದಲ್ಲೇ ಸ್ಯಾನಿಟರಿ ನ್ಯಾಪ್ಕಿನ್‌ಗಳು, ಕುಡಿಯುವ ನೀರು, ವೈ-ಫೈ, ಫ್ಯಾನ್, ಸಣ್ಣ ಟಿವಿ, 5 ಭಾಷೆಗಳಲ್ಲಿ ಕನ್ನಡ ಕಲಿಕೆಯ ಪುಸ್ತಕಗಳು ಎಲ್ಲವನ್ನೂ ಉಚಿತವಾಗಿ ಒದಗಿಸುತ್ತಿದ್ದಾರೆ.

 

CurlyTales ವರದಿ ಮಾಡಿದಂತೆ, ಮಣಿವೇಲ್ ಗರ್ಭಿಣಿಯರು ಮತ್ತು ಡಯಾಲಿಸಿಸ್ ರೋಗಿಗಳಿಗೆ 10 ಕಿ.ಮೀವರೆಗೆ ಉಚಿತ ಸವಾರಿಯನ್ನು ನೀಡುತ್ತಿದ್ದಾರಂತೆ.

 

ಈ ಸೇವೆಗೆ ಕಾರಣವೇನು?

2017ರಲ್ಲಿ ತಮ್ಮ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಅವರಿಗೆ ಬಹಳ ಕಷ್ಟವಾಯಿತು. ಆ ಅನುಭವವೇ ಇಂದು ಇತರರಿಗೆ ಸಹಾಯ ಮಾಡಲು ಪ್ರೇರಣೆ ಆಯಿತು. ನಂತರ, ಡಯಾಲಿಸಿಸ್ ಸಮಸ್ಯೆಯಿಂದ ಬಳಲುತ್ತಿದ್ದ ತಮ್ಮ ಸ್ನೇಹಿತನ ಕಷ್ಟವನ್ನು ಕಂಡು, ಆ ರೋಗಿಗಳಿಗೂ ಉಚಿತ ಸೇವೆ ನೀಡಲು ಅವರು ಮುಂದಾದರು.

 

ಇದೀಗ, ಇದೇ ಸೇವೆಯನ್ನು ನೀಡಲು ಸಿದ್ಧರಾದ ಆಟೋ ಚಾಲಕರಿಗಾಗಿ ಅವರು “Super Auto” ಎಂಬ ಆಪ್ ಕೂಡ ಅಭಿವೃದ್ಧಿಪಡಿಸಿದ್ದಾರೆ.