10 December 2025 | Join group

ಕೊಲ್ಲೂರಿನಲ್ಲಿ ಫ್ರೆಂಚ್ ವರ ಮತ್ತು ರಷ್ಯಾದ ವಧುವಿನ ವೈದಿಕ ಮದುವೆ

  • 13 Nov 2025 12:39:16 PM

ಕೊಲ್ಲೂರು: ಮಠದಲ್ಲಿ ನಡೆದ ಸಾಂಪ್ರದಾಯಿಕ ಹಿಂದೂ ವೈದಿಕ ಸಮಾರಂಭದಲ್ಲಿ ಫ್ರಾನ್ಸ್‌ನ ಕೃಷ್ಣಭಕ್ತ ನರೋತ್ತಮ್ ದಾಸ್ ಮತ್ತು ರಷ್ಯಾದ ಜಾಹ್ನವಿದೇವಿ ದಾಸಿ ನವೆಂಬರ್ 7 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪುರೋಹಿತ ಶ್ಯಾಮಸುಂದರ ಅಡಿಗ ಮರವಂತೆ ಅವರ ಮದುವೆಯನ್ನು ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿಸಿದರು.

 

ದೀರ್ಘಕಾಲದಿಂದ ವೃಂದಾವನದಲ್ಲಿ ಧರ್ಮಗ್ರಂಥ ಅಧ್ಯಯನ ಮತ್ತು ಕಥಕ್ ನೃತ್ಯದಲ್ಲಿ ತೊಡಗಿಸಿಕೊಂಡಿದ್ದ ಈ ದಂಪತಿ, ಕೊಲ್ಲೂರಿನ ಅಭಯ ಆಯುರ್ವೇದ ಕೇಂದ್ರದ ಮೂಲಕ ಭಾರತೀಯ ಸಂಪ್ರದಾಯದ ಮದುವೆ ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದರು.

 

ಸರಳ ಆದರೆ ಸೊಗಸಾದ ಈ ಸಮಾರಂಭದಲ್ಲಿ ಸ್ಥಳೀಯ ಪಾಕಪದ್ಧತಿ ಮತ್ತು ಶಾಸ್ತ್ರೀಯ ಸಂಗೀತದ ಮನೋಹರ ಪ್ರದರ್ಶನಗಳು ಅತಿಥಿಗಳನ್ನು ಆಕರ್ಷಿಸಿದವು. ಸುಧೀರ್ ಕೊಡವೂರು ನೇತೃತ್ವದ ‘ರಾಗ ಧಾನ’ ತಂಡದ ಸಂಗೀತ ಕಾರ್ಯಕ್ರಮವು ವಿಶೇಷ ಮೆರುಗನ್ನು ನೀಡಿತು.

 

ಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿದ್ದ ಈ ವಿವಾಹವು ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಿತು.