ಪಶ್ಚಿಮ ಬಂಗಾಳ: ಮಮತಾ ಬ್ಯಾನರ್ಜಿ ಆಳ್ವಿಕೆಯ ಪಶ್ಚಿಮ ಬಂಗಾಳದಲ್ಲಿ ಯುಐಡಿಎಐ ನೀಡಿದ ವರದಿ ಪ್ರಕಾರ ಸುಮಾರು 34 ಲಕ್ಷ ಆಧಾರ್ ಕಾರ್ಡ್ ಹೊಂದಿರುವವರು ಮೃತಪಟ್ಟಿದ್ದಾರೆ ಎಂದು ದಾಖಲಾಗಿದೆ. ಇದೇ ವೇಳೆ, ಸುಮಾರು 13 ಲಕ್ಷ ಮಂದಿ ಆಧಾರ್ ಪಡೆಯದೆ ಸತ್ತಿದ್ದಾರೆ ಎನ್ನುವುದು ಮತ್ತೊಂದು ಆಘಾತಕಾರಿ ಸಂಗತಿ.
ಈ ಹಿನ್ನೆಲೆಯಲ್ಲಿ, ಸತ್ತ ಹಾಗೂ ನಕಲಿ ಮತದಾರರನ್ನು ನಿರ್ಮೂಲನೆ ಮಾಡಲು ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಪಶ್ಚಿಮ ಬಂಗಾಳದಾದ್ಯಂತ ಸತ್ತ ಮತ್ತು ನಕಲಿ ಮತದಾರರನ್ನು ನಿರ್ಮೂಲನೆ ಮಾಡಲು SIR ಪ್ರಕ್ರಿಯೆಯು ಪ್ರಸ್ತುತ ಪ್ರಗತಿಯಲ್ಲಿದೆ.
ಇಷ್ಟು ದೊಡ್ಡ ಸಂಖ್ಯೆಯ ನಕಲಿ ಮತದಾರರು ಬಾಂಗ್ಲಾದೇಶ ಮೂಲದವರೇ? ಇದು ದೇಶದ ಚುನಾವಣಾ ಪ್ರಕ್ರಿಯೆಗೂ ರಾಷ್ಟ್ರದ ಭದ್ರತೆಗೂ ಗಂಭೀರ ಎಚ್ಚರಿಕೆಯ ಸನ್ನಿವೇಶವಾಗಿದೆ.





