31 January 2026 | Join group

ಮಂಗಳೂರಿನ ಬೋಂದೆಲ್ ಪಕ್ಕ ರೈಲ್ವೆ ಟ್ರ್ಯಾಕ್ ಕೆಳಗಡೆ ಕೊಳೆತ ಶವ ಪತ್ತೆ!

  • 31 Mar 2025 01:20:10 PM

ಮಂಗಳೂರು : ಪಟ್ಟಣದ ಬೋಂದೆಲ್ ಪಕ್ಕವಿರುವ ರೈಲ್ವೆ ಹಳಿಯ ಕೆಳಗಡೆ ಕೊಳೆತ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ, ಕೊಳೆತ ಶವವನ್ನು ತೆಗೆಯುವ ಕಾರ್ಯಾಚರಣೆ ನಡೆಸಿದ್ದಾರೆ.

 

ಅಪರಿಚಿತ ಯುವಕ ಕಪ್ಪು ಚುಕ್ಕೆಯ ಅಂಗಿ, ಜೀನ್ಸ್ ಪ್ಯಾಂಟ್ ಹಾಗೂ ಬಿಳಿ ಬಣ್ಣದ ಶೂ ಧರಿಸಿದ್ದಾನೆ. ಸಿಕ್ಕಿದ ವಿಡಿಯೋ ಪರಿಶೀಲನೆ ನಡೆಸಿದಾಗ, ಶವದ ಪಕ್ಕದಲ್ಲಿ ಒಂದು ಸ್ಕ್ರೂ ಡ್ರೈವರ್ ಪತ್ತೆಯಾಗಿದೆ.

 

ವ್ಯಕ್ತಿಯ ಗುರುತು ಇನ್ನೂ ಸಿಕ್ಕಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳು ಶೀಘ್ರವೇ ಬಹಿರಂಗಪಡಿಸಬೇಕಾಗಿದೆ.