10 December 2025 | Join group

ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿ ಕಾಮಿಗಳು : ಪ್ರೊ. ಪುರುಷೋತ್ತಮ್ ಬಿಳಿಮಲೆ ವಿವಾದಾತ್ಮಕ ಹೇಳಿಕೆ.!

  • 19 Nov 2025 02:59:29 PM

ಬೆಂಗಳೂರು : ‘ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿ ಕಾಮಿಗಳು’ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ್ ಬಿಳಿಮಲೆ ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ.

 

ಮೈಸೂರಿನ ಮಾಸನಗಂಗೋತ್ರಿ ಪ್ರಸಾರಂಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಭಾಗವಹಿಸಿ ಈ ಹೇಳಿಕೆ ನೀಡಿದ್ದಾರೆ.

 

ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು. ನಾವು ಸತ್ಯವನ್ನ ಹೇಳಲು ಹಿಂಜರಿಯಬಾರದು, ಯಕ್ಷಗಾನ ಕಲಾವಿದರು ಮೇಳಕ್ಕೆ ಅಂತ 6-7 ತಿಂಗಳು ತಿರುಗುತ್ತಲೇ ಇರುತ್ತಾರೆ. ಅವರಿಗೆ ಯಾರೂ ಕೂಡ ಹೆಣ್ಣು ಕೊಡುತ್ತಿರಲಿಲ್ಲ. ಸ್ತ್ರೀ ವೇಷಾಧಾರಿಗಳು ಒತ್ತಡದಲ್ಲಿರುತ್ತಿದ್ದರು, ಸ್ತ್ರೀ ವೇಷಾಧಾರಿ ಒಂದು ವೇಳೆ ಸಲಿಂಗಕಾಮ ನಿರಾಕರಿಸಿದ್ರೆ ಭಾಗವತರು ಅವರಿಗೆ ಪದ್ಯವನ್ನೇ ಕೊಡುತ್ತಿರಲಿಲ್ಲ. ಹೀಗೆ ಅವರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ಇಂತಹ ಒತ್ತಡದಲ್ಲಿ ಕಲಾವಿದರು ಬದುಕುತ್ತಿದ್ದರು ಎಂದು ಅವರು ಹೇಳಿದ್ದಾರೆ.